ಸುಭಾಷಿತ :

Sunday, March 29 , 2020 10:49 AM

`ಏರ್ ಸ್ಟ್ರೈಕ್ ‘ನ್ನು ಕೆಲ ಪಕ್ಷಗಳು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ : ನಿವೃತ್ತ ಸೇನಾಧಿಕಾರಿ ಪತ್ರ


Saturday, March 9th, 2019 9:26 am

ನವದೆಹಲಿ : ಪುಲ್ವಾಮಾ ದಾಳಿ,ಬಾಲ್ ಕೋಟ್ ಮೇಲಿನ ಭಾರತದ ದಾಳಿಯನ್ನು ಕೆಲ ಪಕ್ಷಗಳು ರಾಜಕೀಯಕ್ಕೆ ಬಳಸಿಕೊಳ್ಳುತಿತ್ತು. ಇದನ್ನು ತಡೆಯುವಂತೆ ಕೋರಿ ನೌಕಾಪಡೆಯ ನಿವೃತ್ತ ಮುಖ್ಯಸ್ಥ ಅಡ್ಮಿರಲ್ ಎಲ್. ರಾಮ್ ದಾಸ್ ಅವರು ಭಾರತೀಯ ಚುನಾವಣೆ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಭಾರತೀಯ ಚುನಾವಣೆ ಆಯೊಗದ ಆಯುಕ್ತ ಸುನಿಲ್ ಅರೋರಾ ಅವರಿಗೆ ಪತ್ರ ಬರೆದಿರುವ ರಾಮ್ ಪ್ರಸಾದ್, ಭಯೋತ್ಪಾದನಾ ದಾಳಿ, ಸೇನೆಯ ಕಾರ್ಯಾಚರಣೆ, ಅಭಿನಂದನ್ ಅವರ ಪ್ರಕರಣಕ್ಕೆ ರಾಜಕೀಯಕ್ಕೆ ಬಳಕೆಯಾಗುತ್ತಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಚುನಾವಣೆ ಘೋಷಣೆಯಾಗುವುದಿದೆ. ಇಂಥ ಸಂದರ್ಭದಲ್ಲಿ ಸೇನೆಯ ವಿಚಾರಗಳನ್ನೆತ್ತಿಕೊಂಡು, ಸೇನಾ ಕಾರ್ಯಾಚರಣೆಗಳನ್ನು ಮುಂದಿಟ್ಟುಕೊಂಡು ದೇಶ ಪ್ರೇಮ, ವೀರತ್ವದ ಸಂದೇಶಗಳನ್ನು ಜನರಿಗೆ ತಲುಪಿಸಿದ ರಾಜಕೀಯ ಪ್ರಭಾವ ಬೀರುವುದನ್ನು ಚುನಾವಣೆ ಆಯೋಗ ತಡೆಯುವುದು ಅಗತ್ಯ ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions