ಸುಭಾಷಿತ :

Tuesday, January 28 , 2020 2:07 PM

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಮಹತ್ವದ ‘ಮೈಲಿಗಲ್ಲು’: ಸೇನಾ ಕಾಯ್ದೆಗೆ ‘ತಿದ್ದುಪಡಿ’ ತರಲು ಮುಂದಾದ ಪಾಕ್‌


Wednesday, November 13th, 2019 1:49 pm

ನವದೆಹಲಿ: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತೀರ್ಪನ್ನು ಜಾರಿಗೆ ತರಲು ಪಾಕಿಸ್ತಾನ ಸರ್ಕಾರ ಪಾಕಿಸ್ತಾನ ಸೇನಾ ಕಾಯ್ದೆಗೆ ತಿದ್ದುಪಡಿ ತರಲಿದೆ ಎನ್ನಲಾಗಿದೆ. ಈ ತಿದ್ದುಪಡಿಯು ಮಿಲಿಟರಿ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾದವರ ವಿರುದ್ಧ ನಾಗರಿಕ ನ್ಯಾಯಾಲಯದಲ್ಲಿ ಶಿಕ್ಷೆಗೊಳಗಾದವರ ವಿರುದ್ಧ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಹೊಂದಿದ್ದು, ಇದರಂತೆ, ಜಾಧವ್ ಅವರು ಕೂಡ ಮೇಲ್ಮನವಿ ಸಲ್ಲಿಸಬಹುದಾಗಿದೆ.

ಜುಲೈ 17, 2019 ರಂದು ಅಂತರ್‌ರಾಷ್ಟ್ರೀಯ ನ್ಯಾಯಾಲಯ ಪಾಕ್‌ ನ್ಯಾಯಾಲಯ ನೀಡಿದ್ದ ಮರಣದಂಡನೆಯನ್ನು ತಡೆಹಿಡಿಯಲು ಆದೇಶಿಸಿತ್ತು ಮತ್ತು ಪಾಕಿಸ್ತಾನವನ್ನು ತನ್ನ ವಿಚಾರಣೆ ಮತ್ತು ಅಪರಾಧದ ಪರಿಣಾಮಕಾರಿ ಪರಿಶೀಲನೆ ಮಾಡಬೇಕು ಅಂತ ಹೇಳಿತ್ತು.  ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಿಂದ ಮಾರ್ಚ್ 3, 2016 ರಂದು ಕುಲ್ಭೂಷಣ್ ಜಾಧವ್ ಅವರನ್ನು ಬಂಧಿಸಲಾಯಿತು, ಬೇಹುಗಾರಿಕೆ ನಡೆಸಿದ ಆರೋಪಕ್ಕಾಗಿ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯವು 2017 ರ ಏಪ್ರಿಲ್ 10 ರಂದು ಮರಣದಂಡನೆ ವಿಧಿಸಿತ್ತು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions