ಮಂಗಳೂರು : ದೀಪಾವಳಿ ಹಬ್ಬದ ಸಾಲು ಸಾಲು ರಜೆಯ ಹಿನ್ನೆಲೆಯಲ್ಲಿ ತೀರ್ಥ ಕ್ಷೇತ್ರಗಳಿಗೆ ತೆರಳುವ ಭಕ್ತರಿಗೆ ಉಪಯುಕ್ತ ಮಾಹಿತಿಯೊಂದಿದೆ. ತಿರುಪತಿ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ಅನೇಕ ತೀರ್ಥಕ್ಷೇತ್ರಗಳಿಗೆ ತೆರಳುವ ಭಕ್ತಾಧಿಗಳು ಈ ವಿಚಾರವನ್ನು ಗಮನಿಸಬೇಕಿದೆ

BIGG NEWS : ಅಡಿಕೆ ಬೆಳೆಗೆ `ಎಲೆ ಚುಕ್ಕೆ’ ರೋಗ ಬಾಧೆ ಹಾವಳಿ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು ನಿಯೋಗ: ಗೃಹ ಸಚಿವ ಆರಗ ಜ್ಞಾನೇಂದ್ರ

ಅಕ್ಟೋಬರ್‌ 25ರಂದು ಈ ವರ್ಷದ ಕೊನೆಯ ಸೂರ್ಯಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ಅನೇಕ ತೀರ್ಥಕ್ಷೇತ್ರಗಳಲ್ಲಿ ದೇವರ ಸೇವೆಗಳು ಸೇರಿದಂತೆ ಅನ್ನದಾನ ಇರುವುದಿಲ್ಲ. ಈ ಬಗ್ಗೆ ಭಕ್ತಾಧಿಗಳು ಗಮನಹರಿಸಬೇಕಾಗಿದೆ.

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲಿ ಅಕ್ಟೋಬರ್‌ 25ರಂದು ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಆ ದಿನ ಯಾವುದೇ ದೇವರ ಸೇವೆಗಳು ಇರುವುದಿಲ್ಲ ಹಾಗೂ ಭಕ್ತಾಧಿಗಳಿಗೆ ಭೋಜನ ವ್ಯವಸ್ಥೆ ಇರುವುದಿಲ್ಲ ಎಂದು ದೇವಸ್ಥಾನ ಆಡಳಿತ ಮಂಡಳಿ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನು ಗ್ರಹಣ ಶುದ್ಧಿ ಬಳಿಕ ಅಕ್ಟೋಬರ್ 26ರಂದು ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯ ದೇವರ ನಿತ್ಯದ ಪೂಜೆಯ ಸಮಯದಲ್ಲಿ ವ್ಯತ್ಯಯವಾಗುತ್ತದೆ. ಅಕ್ಟೋಬರ್ 26ರಂದು ಬೆಳಗ್ಗೆ 9ಗಂಟೆಯ ಬಳಿಕ ಭಕ್ತಾಧಿಗಳ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಬಳಿಕ ಎಂದಿನಂತೆ ಪೂಜಾ ಸೇವೆಗಳು, ಭೋಜನ ವ್ಯವಸ್ಥೆ ಇರುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ. ಶ್ರೀ ಕ್ಷೇತ್ರ ಕುಕ್ಕೆಗೆ ತೆರಳುವ ಯಾತ್ರಾರ್ಥಿಗಳು ಈ ವಿಚಾರವನ್ನು ಗಮನಿಸಬೇಕಿದೆ.

BIGG NEWS : ಅಡಿಕೆ ಬೆಳೆಗೆ `ಎಲೆ ಚುಕ್ಕೆ’ ರೋಗ ಬಾಧೆ ಹಾವಳಿ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು ನಿಯೋಗ: ಗೃಹ ಸಚಿವ ಆರಗ ಜ್ಞಾನೇಂದ್ರ

ಇನ್ನು ತಿರುಪತಿ ದೇವಾಲಯವು ಸಹ ಸೂರ್ಯಗ್ರಹಣದ ಕಾರಣ ಅಕ್ಟೋಬರ್‌ 25 ಮಂಗಳವಾರ ಬಂದ್‌ ಆಗಲಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ, ವಿಐಪಿ, ಶ್ರೀವಾಣಿ, ವಿಶೇಷ ದರ್ಶನವನ್ನು ರದ್ದುಗೊಳಿಸಲಾಗಿದೆ. ಗ್ರಹಣ ಶುದ್ಧಿ, ಪುಣ್ಯಾಹ ಬಳಿಕ ಮತ್ತೆ ದರ್ಶನ ಹಾಗೂ ಇತರ ಸೇವೆಗಳು ಆರಂಭವಾಗಲಿದೆ ಎಂದು ಟಿಟಿಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವರ್ಷದ ಕೊನೆಯ ಸೂರ್ಯಗ್ರಹಣ ಇದೇ ಅಕ್ಟೋಬರ್ 25ರಂದು ದೀಪಾವಳಿ ಹಬ್ಬದ ದಿನ ಗೋಚರಿಸಲಿದೆ. ಅಕ್ಟೋಬರ್ 25ರ ಸಂಜೆ 5.11ಕ್ಕೆ ಸೂರ್ಯಗ್ರಹಣ ಆರಂಭವಾಗಲಿದ್ದು, ಸಂಜೆ 6.27ಕ್ಕೆ ಸೂರ್ಯಗ್ರಹಣ ಕೊನೆಗೊಳ್ಳಲಿದೆ. ಭಾರತದ ಬಹುತೇಕ ಪ್ರದೇಶಗಳಲ್ಲಿ ಈ ಸೂರ್ಯಗ್ರಹಣ ಭಾಗಶಃ ಗೋಚರಿಸಲಿದೆ ಎಂದು ಹೇಳಲಾಗುತ್ತಿದೆ.

BIGG NEWS : ಅಡಿಕೆ ಬೆಳೆಗೆ `ಎಲೆ ಚುಕ್ಕೆ’ ರೋಗ ಬಾಧೆ ಹಾವಳಿ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು ನಿಯೋಗ: ಗೃಹ ಸಚಿವ ಆರಗ ಜ್ಞಾನೇಂದ್ರ

Share.
Exit mobile version