ಸುಭಾಷಿತ :

Tuesday, January 28 , 2020 2:07 PM

‘ಬೆಂಗಳೂರು-ಕುಂದಾಪುರ’ KSRTC ಪ್ರಯಾಣಿಕರೇ ಗಮನಿಸಿ : ನ.7ರಿಂದ ‘ಅಂಬಾರಿ ಡ್ರೀಮ್ ಕ್ಲಾಸ್ ಎಸಿ ಸ್ಲೀಪರ್’ ಬಸ್ ಸೇವೆ ಆರಂಭ


Saturday, November 2nd, 2019 8:28 pm

ಬೆಂಗಳೂರು : ಇದುವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ವಿವಿಧ ಬಗೆಯ ಬಸ್ ಗಳನ್ನು ಬೆಂಗಳೂರು-ಕುಂದಾಪುರ ಮಾರ್ಗವಾಗಿ ಚಲಿಸಲು ಪ್ರಯಾಣಿಕರ ಅನುಕೂಲಕ್ಕಾಗಿ ಬಿಡಲಾಗಿತ್ತು. ಇದೀಗ ಇಂತಹ ಕೆ ಎಸ್ ಆರ್ ಟಿ ಸಿ ಬೆಂಗಳೂರು-ಕುಂದಾಪುರ ಮಾರ್ಗದಲ್ಲಿ ಅಂಬಾರಿ ಡ್ರೀಮ್ ಕ್ಲಾಸ್ ( ಮಲ್ಟಿಆಕ್ಸಲ್ ಎಸಿ ಸ್ಲೀಪರ್ ) ಹೊಸ ಸಾರಿಗೆ ಬಸ್ ಅನ್ನು ನವೆಂಬರ್ 7ರಿಂದ ಆರಂಭಿಸಿದೆ.

ಈಗಾಗಲೇ ಖಾಸಗೀ ಬಸ್ ಗಳ ಸೇವೆಗೆ ಸವಾಲ್ ಒಡ್ಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಎಲ್ಲಾ ಬಗೆಯ ಬಸ್ ಸೇವೆಗಳನ್ನು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಗೂ ಸೇವೆ ಒದಗಿಸುತ್ತಿದೆ. ಇಂತಹ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಈಗಾಗಲೇ ಬೆಂಗಳೂರು-ಕುಂದಾಪುರಕ್ಕೆ ಹಲವು ಬಗೆಯ ಬಸ್ ಸಂಚಾರವನ್ನು ಆರಂಭಿಸಿತ್ತು. ಇಂತಹ ನಿಗಮ ನವೆಂಬರ್ 7ರಿಂದ ಹೊಸದಾಗಿ ಬೆಂಗಳೂರು-ಕುಂದಾಪುರ ಮಾರ್ಗವಾಗಿ ಅಂಬಾರಿ ಡ್ರೀಮ್ ಕ್ಲಾಸ್ ( ಮಲ್ಟಿಆಕ್ಸಲ್ ಎಸಿ ಸ್ಲೀಪರ್ ) ಸೇವೆ ಆರಂಭಿಸಿದಲಿದೆ.

ಹೊಸದಾಗಿ ಬೆಂಗಳೂರು-ಕುಂದಾಪುರ ಮಾರ್ಗವಾಗಿ ನವೆಂಬರ್ 7ರಿಂದ ಆರಂಭವಾಗುತ್ತಿರುವ ಅಂಬಾರಿ ಡ್ರೀಮ್ ಕ್ಲಾಸ್ ( ಮಲ್ಟಿಆಕ್ಸಲ್ ಎಸಿ ಸ್ಲೀಪರ್ ) ಬಸ್ ನ ಪ್ರಯಾಣದರ ರೂ.1000 ಆಗಿದೆ. ಬೆಂಗಳೂರಿನಿಂದ ರಾತ್ರಿ 10.10ಕ್ಕೆ ಬಿಡಲಿರುವ ಈ ಬಸ್, ಹಾಸನ, ಮಂಗಳೂರು, ಉಡುಪಿ ಹಾಗೂ ಮಣಿಪಾಲ್ ಮಾರ್ಗವಾಗಿ ತೆರಳಿದೆ. ಮಂಗಳೂರನ್ನು ಬೆಳಿಗ್ಗೆ 5 ಗಂಟೆಗೆ ತಲುಪಿದ್ರೇ, ಕುಂದಾಪುರಕ್ಕೆ ಬೆಳಿಗ್ಗೆ 7.30ಕ್ಕೆ ತಲುಪಲಿದೆ. ಮತ್ತೆ ಕುಂದಾಪುರದಿಂದ ಬೆಂಗಳೂರಿಗೆ ರಾತ್ರಿ 8.45ಕ್ಕೆ ಬಿಡಲಿರುವ ಅಂಬಾರಿ ಡ್ರೀಮ್ ಕ್ಲಾಸ್ ( ಮಲ್ಟಿಆಕ್ಸಲ್ ಎಸಿ ಸ್ಲೀಪರ್ ) ಬಸ್, ಮಂಗಳೂರು 11.30ಕ್ಕೆ ಬಂದು ತಲುಪಲಿದೆ. ಅಲ್ಲಿಂದ ಬೆಂಗಳೂರಿಗೆ ಬೆಳಿಗ್ಗೆ 6 ಗಂಟೆಗೆ ತಲುಪಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions