KSRTC ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ : ವಾರಾಂತ್ಯ ಶೇ.10ರ ಹೆಚ್ಚುವರಿ ಪ್ರಯಾಣ ದರ ರದ್ದು – Kannada News Now


State

KSRTC ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ : ವಾರಾಂತ್ಯ ಶೇ.10ರ ಹೆಚ್ಚುವರಿ ಪ್ರಯಾಣ ದರ ರದ್ದು

ಬೆಂಗಳೂರು : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಾರಾಂತ್ಯ ದಿನಗಳಂದು ಪ್ರತಿಷ್ಠಿತ ಸಾರಿಗೆಗಳಲ್ಲಿ ಶೇ.10ರಷ್ಟು ವಿಧಿಸಲಾಗುತ್ತಿದ್ದಂತ ಹೆಚ್ಚುವರಿ ಪ್ರಯಾಣ ದರವನ್ನು ರದ್ದು ಪಡಿಸಿದೆ. ಈ ಮೂಲಕ ಕೆ ಎಸ್ ಆರ್ ಟಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.

ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಪತ್ರ ಬರೆದಿದ್ದು, ಕೋವಿಡ್ 19 ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ನಿಗಮದ ವತಿಯಿಂದ ಕಾರ್ಯಾಚರಣೆ ಮಾಡುತ್ತಿರುವ ಪ್ರತಿಷ್ಠಿತ ಹವಾನಿಯಂತ್ರಿತ ಸಾರಿಗೆಗಳಲ್ಲಿ ಪ್ರಯಾಣಿಸಲು ಸಾರ್ವಜನಿಕ ಪ್ರಯಾಣಿಕರು ಆಸಕ್ತಿ ತೋರಿಸುತ್ತಿರುವುದಿಲ್ಲ ಹಾಗೂ ನೆರೆ ರಾಜ್ಯಗಳಾದ ಆಂಧ್ರ ಪ್ರದೇಶ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಂದು ಶೇ.10 ಹೆಚ್ಚುವರಿ ಪ್ರಾಯಣ ದರ ಆಕರಿಸುತ್ತಿರುವುದಿಲ್ಲ.

ಪ್ರಯಾಣಿಕರನ್ನು ನಿಗಮದ ಸಾರಿಗೆಗಳತ್ತ ಆಕರ್ಷಿಸುವ ದೃಷ್ಠಿಯಿಂದ ಪ್ರತಿಷ್ಠಿತ ಸಾರಿಗೆಗಳಲ್ಲಿ ವಾರಾಂತ್ಯ ದಿನಗಳಂದು ಶೇ.10 ಪ್ರಯಾಣದರವನ್ನು ಹೆಚ್ಚಿಸಿ ಪ್ರಯಾಣದರ ವಿಧಿಸುತ್ತಿರುವುದನ್ನು ಡಿಸೆಂಬರ್-2020ರವರೆಗೆ ಹಿಂಪಡೆಯುವುದು ಸೂಕ್ತವೆಂದು ಅಭಿಪ್ರಾಯಿಸಿ, ನಿಗಮದ ಪ್ರತಿಷ್ಠಿತ ಸಾರಿಗೆಗಳಲ್ಲಿ ವಾರಾಂತ್ಯ ದಿವಸಗಳಂದು ಪ್ರತಿ ಶುಕ್ರವಾರ ಗಮ್ಯ ಸ್ಥಳಕ್ಕೆ ಹೊರಡುವ ಮತ್ತು ಗಮ್ಯ ಸ್ಥಳಗಳಿಂದ ಪ್ರತಿ ಭಾನುವಾರಗಳಂದು ನಿರ್ಗಮಿಸುವ ಸಾರಿಗೆಗಳಲ್ಲಿ ಮೂಲ ಪ್ರಯಾಣದರವನ್ನು ಶೇ.10ರಷ್ಟು ಹೆಚ್ಚಿಸಿ ಆಕರಿಸುತ್ತಿರುವುದನ್ನು ದಿನಾಂಕ 16-10-2020ರಿಂದ ಜಾರಿಗೆ ಬರುವಂತೆ ದಿನಾಂಕ 31-12-2020ರವರೆಗೆ ಹಿಂಪಡಿದೆ. ಈ ಮೂಲಕ ಕೆ ಎಸ್ ಆರ್ ಟಿ ಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.

ವರದಿ : ವಸಂತ ಬಿ ಈಶ್ವರಗೆರೆ

 




error: Content is protected !!