ಬೆಂಗಳೂರು: ಕರ್ನಾಟಕ ಪ್ರಾಧಿಕಾರದಿಂದ ದಿನಾಂಕ 13.01.2024 ರಂದು 42 ವಿವಿಧ ವಿಷಯಗಳ ಪತ್ರಿಕೆಗಳಿಗೆ ಕೆಸೆಟ್-2023 ಪರೀಕ್ಷೆಯನ್ನು ನಡೆಲಾಗಿತ್ತು. ಈ ಪತ್ರಿಕೆಗಳಿಗೆ ಸಂಬಂಧಿಸಿದಂತೆ ಕೀ ಉತ್ತರಗಳನ್ನು ದಿನಾಂಕ 29.01.2024 ರಂದು ಪ್ರಕಟಿಸಿ ದಿನಾಂಕ 07.02.2024 ರ ವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಕೆಲವು ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸಲು ಹೆಚ್ಚಿನ ಕಾಲಾವಾಶ ಕೋರಿದ ಹಿನ್ನಲೆಯಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 17.02.2024 ರ ವರೆಗೆ ದಿನಾಂಕ ವಿಸ್ತರಿಸಲಾಗಿತ್ತು.ಆಕ್ಷೇಪಣೆಗಳು ಸ್ವೀಕೃತವಾದ 23 ಪತ್ರಿಕೆಗಳಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ವಿಷಯ ತಜ್ಞರ ಸಮಿತಿಗಳ ಮೂಲಕ ಪರಿಶೀಲಿಸಲಾಯಿತು. ಅವುಗಳಲ್ಲಿ ಮನಃಶಾಸ್ತ್ರ ವಿಷಯವನ್ನು ಹೊರತು ಪಡಿಸಿ ಉಳಿದ 22 ಪತ್ರಿಕೆಗಳಲ್ಲಿ ವಿಷಯ ತಜ್ಞರ ಸಮಿತಿಗಳು ನೀಡಿದ ಶಿಫಾರಸ್ಸಿನಂತೆ ಕೆಲವು ಕೀ ಉತ್ತರಗಳು ಬದಲಾವಣೆಗೊಂಡಿದ್ದು, ಸದರಿ ಪರಿಷ್ಕೃತ ಕೀ ಉತ್ತರಗಳನ್ನು ಪ್ರಕಟಿಸಲಾಗಿದೆ.

Share.
Exit mobile version