ಸುಭಾಷಿತ :

Tuesday, April 7 , 2020 6:53 PM

`ಮುಟ್ಟಾದ ಹೆಣ್ಣು ಅಡುಗೆ ಮಾಡಿದರೆ ನಾಯಿಯಾಗಿ ಹುಟ್ಟುತ್ತಾರೆ’ : ಗುಜರಾತ್ ಸ್ವಾಮೀಜಿಯಿಂದ ವಿವಾದಾತ್ಮಕ ಹೇಳಿಕೆ


Tuesday, February 18th, 2020 1:39 pm

ಗುಜರಾತ್ : ಮುಟ್ಟಾದ ಹೆಣ್ಣು ಅಡುಗೆ ಮಾಡಿದರೆ ಆಕೆ ಮುಂದಿನ ಜನ್ಮದಲ್ಲಿ ಹೆಣ್ಣು ನಾಯಿಯಾಗಿ ಜನಿಸುತ್ತಾರೆ ಎಂದು ಗುಜರಾತ್ ನ ಭುಜ್ ನಲ್ಲಿರುವ ಸ್ವಾಮಿ ನಾರಾಯಣ ಭುಜ್ ಮಂದಿರದ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಪ್ರವಚನವೊಂದರಲ್ಲಿ ಕೃಷ್ಣಸ್ವರೂಪ್ ದಾಸ್ ಜಿ ಮಹಾರಾಜ್ ಸ್ವಾಮೀಜಿ ಮಾತನಾಡಿದ್ದು, ಋತುಮತಿಯಾಗಿದ್ದ ವೇಳೆ ಮಹಿಳೆ ತಯಾರಿಸಿದ ಅಡುಗೆ ತಿಂದರೆ ಮುಂದಿನ ಜನ್ಮದಲ್ಲಿ ಎತ್ತಾಗಿ ಹುಟ್ಟುತ್ತಾರೆ, ಮುಟ್ಟಾದ ಹೆಣ್ಣು ಅಡುಗೆ ಮಾಡಿದರೆ ಆಕೆ ಮುಂದಿನ ಜನ್ಮದಲ್ಲಿ ಹೆಣ್ಣು ನಾಯಿಯಾಗಿ ಜನ್ಮ ಪಡೆಯುತ್ತಾಳೆ ಎಂದು ಹೇಳಿದ್ದಾರೆ.

ಸದ್ಯ ಸ್ವಾಮೀಜಿಗಳ ಈ ಮಾತು ದೇಶಾದ್ಯಂತ ಚರ್ಚೆ ಹುಟ್ಟುಹಾಕಿದ್ದು, ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲ ದಿನಗಳ ಹಿಂದೆ ಭುಜ್ ನ ಸ್ವಾಮಿ ನಾರಾಯಣ ಮಂದಿರದ ಪ್ರಾಂಗಣದಲ್ಲಿ ಇರುವ ಮಹಿಳಾ ಹಾಸ್ಟೆಲ್ ನಲ್ಲಿ ಯುವತಿ ಋತುಮತಿ ಆಗಿದ್ದರೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಲು ಕಾಲೇಜಿನ ಪ್ರತಿ ವಿದ್ಯಾರ್ಥಿನಿಯರ ಉಡುಪಿ ಬಿಚ್ಚಿಸಿ ಪರೀಕ್ಷಿಸಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions