ಸುಭಾಷಿತ :

Wednesday, January 29 , 2020 9:36 PM

ಕೇರಳದ ಈ ದೇವಾಲಯದಲ್ಲಿ ಪುರುಷರು ಮಹಿಳೆಯರಂತೆ ವೇಷ ಧರಿಸಿ ದೇವಿಯ ಪೂಜೆ ಮಾಡುತ್ತಾರೆ…


Thursday, December 5th, 2019 1:02 pm

ಸ್ಪೆಷಲ್ ಡೆಸ್ಕ್ : ಕೆಲವು ದೇವಾಲಯಗಳಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ, ಇನ್ನು ಕೆಲವು ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವಿರೋದಿಲ್ಲ ಈ ಬಗ್ಗೆ ನಾವು ಕೇಳಿದ್ದೇವೆ. ಆದರೆ ಪುರುಷರು ಮಹಿಳೆಯರಂತೆ ಬದಲಾಗಿ ದೇವರಿಗೆ ಪೂಜೆ ಸಲ್ಲಿಸುವುದನ್ನು ನೋಡಿದ್ದೀರಾ? ಅಥವಾ ಈ ಬಗ್ಗೆ ಕೇಳಿದ್ದೀರಾ? ಇಲ್ವಾ.. ಇಂತಹ ಆಚರಣೆ ಕೇರಳದಲ್ಲಿದೆ… ಆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ…

ಕೇರಳದ ಕೊಲ್ಲಂನ ಕೊಟ್ಟಂಕುಲಂಗರ ಶ್ರೀ ದೇವಿ ದೇವಸ್ಥಾನದಲ್ಲಿ ಈ ಆಚರಣೆ ನಡೆಯುತ್ತದೆ. ಈ ದೇವಾಲಯದಲ್ಲಿ ಚಾಮಯವಿಲಕ್ಕು ಹಬ್ಬವು ಮಾರ್ಚ್ ತಿಂಗಳಲ್ಲಿ 10-12 ದಿನಗಳವರೆಗೆ ಆಚರಿಸಲಾಗುತ್ತದೆ.

ಈ ಉತ್ಸವದ ಅತ್ಯಂತ ಆಸಕ್ತಿದಾಯಕ ಭಾಗವೆಂದರೆ ಪುರುಷರು ತಮ್ಮ ದೇಹವನ್ನು ಸ್ತ್ರೀ ಉಡುಪು, ಅಂದರೆ ಸೀರೆ, ಆಭರಣಗಳು, ಮಲ್ಲಿಗೆ ಹೂವುಗಳಿಂದ ಸಿಂಗರಿಸಿ, ಮೇಕಪ್ ಮಾಡಿಕೊಳ್ಳುತ್ತಾರೆ ಮತ್ತು ಅಷ್ಟೇ ಅಲ್ಲಾ ತಾವು ಮಹಿಳೆಯರಂತೆ ಕಾಣಲು ತಮ್ಮ ಮೀಸೆಯನ್ನು ಸಹ ಕತ್ತರಿಸಿಕೊಳ್ಳುತ್ತಾರೆ.

ಪುರುಷರು ತಮ್ಮ ಪುರುಷತ್ವದ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆ, ಆದರೆ ಕೇರಳದಲ್ಲಿ, ಮಹಿಳೆಯರಂತೆ ಉಡುಗೆ ತೊಟ್ಟುಕೊಳ್ಳುವುದು ಅವರಿಗೆ ಕಷ್ಟವಾಗಿದ್ದರೂ, ಪ್ರತಿ ವರ್ಷವೂ ಒಂದು ದಿನ, ಚಮಯವಿಲಕ್ಕು ಹಬ್ಬಕ್ಕೆ ಇದನ್ನು ಮಾಡಿಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ದೇವಿಗೆ ಭಕ್ತಿಯಿಂದ ಪೂಜಿಸುತ್ತಾರೆ.

ದೇವಾಲಯದ ಈ ವಿಚಿತ್ರ ಆಚರಣೆ ಬಗ್ಗೆ ಸ್ಥಳೀಯ ನಂಬಿಕೆಗಳ ಪ್ರಕಾರ, ಹುಡುಗಿಯರಂತೆ ಧಿರಿಸು ಧರಿಸಿದ್ದ ಕೆಲ ದನಗಾಹಿ ಹುಡುಗರ ಗುಂಪು ಕಲ್ಲಿನ ಸುತ್ತಲೂ ಆಟವಾಡುತ್ತಿತ್ತು, ಅದನ್ನು ಅವರು ದೇವರು ಎಂದು ಪರಿಗಣಿಸಿ, ಪೂಜಿಸುತ್ತಿದ್ದರಂತೆ. ಆಶ್ಚರ್ಯವೆಂಬಂತೆ ಒಂದು ದಿನ, ದೇವಿಯು ಸ್ವತಃ ಕಲ್ಲಿನಿಂದ ಅವರ ಮುಂದೆ ಕಾಣಿಸಿಕೊಂಡಳು.ಇದನ್ನು ನೋಡಿ ದಿಗ್ಬ್ರಾಂತರಾದ ಹುಡುಗರು ಕೂಡಲೇ ಘಟನೆ ಬಗ್ಗೆ ಊರಿನಲ್ಲಿ ತಿಳಿಸಿದರು.

ಸುದ್ದಿ ಹಬ್ಬುತ್ತಲೇ ಅಲ್ಲಿನ ಜನ ಇದು ದೇವರ ಆಜ್ಞೆ ಎಂದು ಪರಿಗಣಿಸಿ ಕಲ್ಲನ್ನು ಪ್ರತಿಷ್ಠಾಪಿಸಲು ದೇವಾಲಯವನ್ನು ನಿರ್ಮಾಣ ಮಾಡಿದರು. ಸ್ತ್ರೀ ಉಡುಪಿನಲ್ಲಿದ್ದ ಪುರುಷರಿಗೆ ದೇವಿ ಕಂಡಿದ್ದರಿಂದ ತಮ್ಮನ್ನು ತಾವು ಹೆಣ್ಣು ಮಕ್ಕಳಂತೆ ಸಿಂಗರಿಸುವ ಈ ಸಂಪ್ರದಾಯವು ಹುಟ್ಟಿಕೊಂಡಿತು.

ಅಂದಿನಿಂದ ಇಂದಿನವರೆಗೂ ಎಲ್ಲಾ ವಯಸ್ಸಿನ ಪುರುಷರು, ಪ್ರತಿವರ್ಷ ದೇವಾಲಯವನ್ನು ಸ್ತ್ರೀ ಉಡುಪು ಧರಿಸಿ ಅಧಿ ದೇವತೆಯನ್ನು ಮೆಚ್ಚಿಸಲು ಮತ್ತು ಅವಳ ಅನುಗ್ರಹವನ್ನು ಗಳಿಸುವ ಸಲುವಾಗಿ ದೀಪ ಹಚ್ಚಿ ಪೂಜೆ ಮಾಡುತ್ತಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions