ನವದೆಹಲಿ : ಕೋಲ್ಕತಾ ನೈಟ್ ರೈಡರ್ಸ್ ತಂಡದ ನೂತನ ಕೋಚ್ ಆಗಿ ಚಂದ್ರಕಾಂತ್ ಪಂಡಿತ್ ಅವರನ್ನ ನೇಮಕ ಮಾಡಲಾಗಿದ್ದು, ಬ್ರೆಂಡನ್ ಮೆಕಲಮ್ ಅವರಿಂದ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಐಪಿಎಲ್ ಫ್ರಾಂಚೈಸಿ ಬುಧವಾರ ಪ್ರಕಟಿಸಿದೆ.

ಪಂಡಿತ್ ಒಬ್ಬ ಯಶಸ್ವಿ ತರಬೇತುದಾರಾಗಿದ್ದು, ವಿವಿಧ ತಂಡಗಳೊಂದಿಗೆ ಅನೇಕ ರಣಜಿ ಪ್ರಶಸ್ತಿಗಳನ್ನ ಗೆದ್ದಿದ್ದಾರೆ. ಈ ವರ್ಷ ಅವ್ರು ಮಧ್ಯಪ್ರದೇಶವನ್ನ ತಮ್ಮ ಚೊಚ್ಚಲ ರಣಜಿ ಪ್ರಶಸ್ತಿಗೆ ಕೊಂಡೊಯ್ದರು. ಕಳೆದ 7 ವರ್ಷಗಳಲ್ಲಿ, ಅವರು ತರಬೇತುದಾರರಾಗಿ 4 ರಣಜಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2015-16ರಲ್ಲಿ ಮುಂಬೈ ತಂಡ ಟ್ರೋಫಿ ಗೆದ್ದಾಗ ಕೋಚ್ ಆಗಿದ್ದರು. ನಂತರ ಪಂಡಿತ್ ಅವರು ವಿದರ್ಭದ ತರಬೇತುದಾರರಾಗಿ ಅಧಿಕಾರ ವಹಿಸಿಕೊಂಡರು ಮತ್ತು 2017-18 ಮತ್ತು 2018-19ರಲ್ಲಿ ಎರಡು ಬ್ಯಾಕ್-ಟು-ಬ್ಯಾಕ್ ಅಭಿಯಾನಗಳನ್ನ ಗೆದ್ದರು.

Share.
Exit mobile version