ಮಡಿಕೇರಿ: ಕೊಡಗಿನಲ್ಲಿ ಮತ್ತೆ ಭೂಮಿ ನಡುಗಿದ್ದು, ಸತತ ಏಳನೇ ಬಾರಿ ಕೊಡಗಿನ ಜನತೆ ಭೂಮಿ ಕಂಪನದ ಅನುಭವನ್ನು ಅನುಭವಿಸಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇಂದು ಮಧ್ಯಾಹ್ನ 1.20ರ ಸುಮಾರಿಗೆ ಭಾರಿ ಶಬ್ದದೊಂದಿಗೆ 3/4 ಸೆಕೆಂಡ್ ಭೂಮಿ ಮಡಿಕೇರಿಯ ಚೆಂಬು, ಪೆರಾಜೆ ಹಾಗೂ ಕರಿಕೆಯಲ್ಲಿನ ಜನತೆಗೆ ಭೂಮಿ ಕಂಪಿಸಿರುವ ಅನುಭವಾಗಿದೆ.

ಇನ್ನೂ ಭೂಮಿ ಕಂಪನ ಪದೇ ಪದೇ ಆಗುತ್ತಿರುವ ಕಾರಣ ಜಿಲ್ಲೆಯ ಜನತೆಯಲ್ಲಿ ಭಯದ ವಾತವಾರಣ ನಿರ್ಮಾಣವಾಗಿದ್ದು, ಜನತೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೂಡಲೇ ಮಧ್ಯೆ ಪ್ರವೇಶ ಮಾಡಿ ಜನತೆಯಲ್ಲಿನ ಆತಂಕವನ್ನು ಕಡಿಮೆ ಮಾಡಬೇಕು ಅಂತ ಆಗ್ರಹಿಸಿದ್ದಾರೆ. ಹೀಗೆ ಪದೇ ಪದೇ ಭೂಕಂಪನವಾದ್ರೆ ಜನತೆ ಹೇಗೆ ಬದುಕಲು ಸಾಧ್ಯ, ಜೀವವನ್ನು ಕೈನಲ್ಲಿ ಹಿಡಿದು ಬದುಕ ಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ ಅಂತ ತಮ್ಮ ಅಳನ್ನು ತೋಡಿಕೊಂಡಿದ್ದಾರೆ.

Share.
Exit mobile version