ಸುಭಾಷಿತ :

Monday, March 30 , 2020 1:11 AM

ಕೊರೊನಾ ಎಫೆಕ್ಟ್ : ಯಾರಾದ್ರೂ ಕೊಡಗು-ಕೇರಳ ಗಡಿ ದಾಟಿದ್ರೆ ಹುಷಾರ್..! ಯಾವುದೇ ಪರಿಶೀಲನೆ ಇಲ್ಲದೇ 14 ದಿನ ಕೋವಿಡ್ ಸೆಂಟರ್ ಗೆ ಸ್ಥಳಾಂತರ


Thursday, March 26th, 2020 8:38 pm

ಕೊಡಗು : ಮಾರಕ ಕೊರೊನಾ ನಿಯಂತ್ರಿಸಲು ಕೊಡಗು ಜಿಲ್ಲಾಡಳಿತ ಕಠಿಣ ಕ್ರಮ ಜಾರಿಗೊಳಿಸಿದೆ. ಕೊಡಗು ಮಾರ್ಗವಾಗಿ ಕೇರಳ ಗಡಿ ಪ್ರವೇಶಿಸಲು ಮುಂದಾದರೆ, ಅಥವಾ ಕೇರಳ ಮಾರ್ಗವಾಗಿ ಕೊಡಗಿಗೆ ಎಂಟ್ರಿ ನೀಡಿದರೆ, ಅಂತಹವರನ್ನು ಯಾವುದೇ ಪರಿಶೀಲನೆ ಇಲ್ಲದೇ 14 ದಿನಗಳ ಕಾಲ ಕೋವಿಡ್ ಸೆಂಟರ್ ಗೆ ಕಳುಹಿಸಲು ನಿರ್ಧರಿಸಲಾಗಿದೆ. 

ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ನಿಯಮ ಮೀರಿ ಯಾರೇ ಗಡಿ ದಾಟಿದರೂ, ಅವರು ವಿದೇಶದಿಂದ ವಾಪಸ್ ಆಗಿರುವ ಇತಿಹಾಸ ಇಲ್ಲದಿದ್ದರೂ ನೇರವಾಗಿ ಕೋವಿಡ್ ಸೆಂಟರ್​ಗೆ ಕಳುಹಿಸುತ್ತಿದ್ದೇವೆ. ಈಗಾಗಲೇ ಕೇರಳದಿಂದ ಬಂದ ಇಬ್ಬರನ್ನು ಕೊಡಗಿನಲ್ಲಿರುವ ಕೋವಿಡ್ ಸೆಂಟರ್​ಗೆ ಕಳುಹಿಸಿದ್ದಾಗಿ ತಿಳಿಸಿದರು.  ವಿದೇಶದಿಂದ ಬಂದು ಹೋಂ ಕ್ವಾರಂಟೈನ್ ನಲ್ಲಿ ಇರುವವರು ನಿಯಮ ಮೀರಿ ಆಚೆ ಓಡಾಡಿದರೆ ಅವರ ವಿರುದ್ಧ ಕೇಸು ದಾಖಲಿಸುತ್ತೇವೆ. ಕಾನೂನು ಪ್ರಕಾರ ಅವರಿಗೆ ಶಿಕ್ಷೆಯಾಗುತ್ತದೆ. ಹೀಗೆ ಶಿಕ್ಷೆಗೆ ಒಳಗಾದವರ ಪಾಸ್​ಪೋರ್ಟ್ ಅಥವಾ ವೀಸಾಗಳಿಗೆ ಸಮಸ್ಯೆಯಾಗಲಿದೆ ಎಂದು ಕಠಿಣ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ….

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions