ಅನಾಫಿಲಿಸ್ ಸೊಳ್ಳೆಯು ಮನುಷ್ಯರಿಗೆ ಕಚ್ಚಿದ ಬಳಿಕ ಪ್ಲಾಸ್ಮೋರಿಯಾವು ಮನುಷ್ಯನ ಯಕೃತ್ ನಲ್ಲಿ ತನ್ನ ಸಂತಾನಾಭಿವೃದ್ಧಿ ಮಾಡಿ, ಸೋಂಕು ಉಂಟು ಮಾಡುವುದು ಮತ್ತು ಕೆಂಪು ರಕ್ತದ ಕಣಗಳನ್ನು ನಾಶ ಪಡಿಸುತ್ತದೆ.. ಸಾಮಾನ್ಯವಾಗಿ ಮಲೇರಿಯಾ ಜ್ವರವನ್ನು ಹೊಂದಿದ ವ್ಯಕ್ತಿಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಇದರಿಂದ ವಿಪರೀತ ಜ್ವರ,ಚಳಿ ಜೊತೆಗೆ ಮೈ ಕೈನೋವು ಕಾಣಿಸಿಕೊಳ್ಳುತ್ತದೆ.
ದೇಹದಲ್ಲಿ ಜ್ವರ ಹೆಚ್ಚಾದಾಗ ಕೆಲವೊಂದು ರೋಗ ಲಕ್ಷಣಗಳು ಕಾಣಿಸುತ್ತವೆ. ಮೂತ್ರ ಪಿಂಡಗಳ ಹಾನಿ, ತಲೆ ನೋವು, ಭೇದಿ, ಮೈಕೈ ನೋವು, ವಿಪರೀತ ಆಯಾಸ, ಅತಿವ ಜ್ವರ, ವಾಕರಿಕೆ ಮತ್ತು ವಾಂತಿ, ಮೈ ಬೆವರುವುದು, ಮೈ ನಡುಗಿಸುವ ಚಳಿ, ಕೈ ಕಾಲುಗಳು ಹಿಡಿದುಕೊಂಡಂತೆ ಆಗುವುದು, ಅನಿಮಿಯಾ, ಮಲದಲ್ಲಿ ರಕ್ತ ಮತ್ತು ಸೆಳೆತ. ಮುಂತಾದ ರೋಗ ಲಕ್ಷಣ ಕಾಣಿಸಿಕೊಳ್ಳುತ್ತದೆ.
ಮಲೇರಿಯ ಜ್ವರವನ್ನು ಕಡಿಮೆ ಮಾಡಲು ಕೆಲವು ಮನೆಮದ್ದುಗಳನ್ನು ಬಳಸಬಹುದು..
ಕಿತ್ತಳೆ ಹಣ್ಣು ಮತ್ತು ದ್ರಾಕ್ಷಿ ಹಣ್ಣುಗಳು ಮಲೇರಿಯಾ ನಿಯಂತ್ರಣಕ್ಕೆ ತುಂಬಾ ಒಳ್ಳೆಯದು.
ಹಣ್ಣುಗಳು ವಿಟಮಿನ್ ‘ ಸಿ ‘ ಅಂಶಗಳನ್ನು ಹೆಚ್ಚಾಗಿ ಹೊಂದಿದೆ. ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸಿ ಯಾವುದೇ ಬಗೆಯ ಕಾಯಿಲೆಗಳ ವಿರುದ್ಧ ಹೋರಾಡುವಂತ ಶಕ್ತಿ ನೀಡುತ್ತದೆ. ದ್ರಾಕ್ಷಿ ಹಣ್ಣಿಗೂ ಕಿತ್ತಳೆ ಹಣ್ಣಿಗೂ ಯಾವುದೇ ವ್ಯತ್ಯಾಸವಿಲ್ಲ. ತಮ್ಮಲ್ಲಿರುವ ಹೇರಳವಾದ ವಿಟಮಿನ್ ‘ ಸಿ ‘ ಅಂಶದಿಂದ ದೇಹದ ಅಸ್ವಸ್ಥತೆಯನ್ನು ಹೋಗಲಾಡಿಸಿ ಜ್ವರದ ತಾಪಮಾನವನ್ನು ಆದಷ್ಟು ಬೇಗನೆ ಕಡಿಮೆ ಮಾಡುತ್ತದೆ.
ಮಲೇರಿಯಾ ಜ್ವರದ ಆಂಟಿ – ಮಲೇರಿಯಾ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ದ್ರಾಕ್ಷಿ ಹಣ್ಣುಗಳನ್ನು ಸೇವಿಸಬಾರದು. ಆದರೆ ಪ್ರತಿ ದಿನ ಕಿತ್ತಳೆ ಹಣ್ಣುಗಳನ್ನು ಮಾತ್ರ ಯಥೇಚ್ಛವಾಗಿ ಸೇವಿಸಬಹುದು. ಕಿತ್ತಳೆ ಹಣ್ಣಿನ ಜ್ಯೂಸ್ ಸಹ ಕುಡಿಯಬಹುದು ಆದರೆ ಸಕ್ಕರೆ ಹಾಕಬಾರದು. ಏಕೆಂದರೆ ಇದು ದೇಹದ ರೋಗ ನಿರೋಧಕ ವ್ಯವಸ್ಥೆಯ ಬಲವನ್ನು ತಗ್ಗಿಸುತ್ತದೆ. ಇನ್ನು ದ್ರಾಕ್ಷಿ ಹಣ್ಣಿನ ಜ್ಯೂಸ್ ಕುಡಿಯುವ ಮುಂಚೆ ಅದನ್ನು ಚೆನ್ನಾಗಿ ಕುದಿಸಿ ಸೋಸಿ ನಂತರ ಕುಡಿಯುವುದು ಉತ್ತಮ.
ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿರುವಂತಹ ಶುಂಠಿಯನ್ನು ವಿವಿದ ಚಿಕಿತ್ಸೆಗೆ ಬಳಸುತ್ತಾರೆ. ಶೀತ, ಜ್ವರ, ವಾಂತಿ ಮತ್ತು ವಾಕರಿಕೆ ನಿವಾರಣೆಗೆ ಇದು ಪರಿಣಾಮಕಾರಿ. ಶುಂಠಿಯಲ್ಲಿ ಇರುವಂತಹ ವಿವಿಧ ರೀತಿಯ ಅಂಶಗಳು ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಕಾಯಿಲೆ ಉಂಟು ಮಾಡುವಂತಹ ಬ್ಯಾಕ್ಟೀರಿಯಾದಿಂದ ದೇಹವನ್ನು ಕಾಪಾಡುವುದು. ಇದರಲ್ಲಿ ಇರುವಂತಹ ಜಿಂಜರೊಲ್ ಎನ್ನುವ ಅಂಶವು ಉರಿಯೂತ ಶಮನಕಾರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಅಂಶವನ್ನು ಹೊಂದಿದೆ.
ಇದು ಮಲೇರಿಯಾದಿಂದ ಬಳಲುತ್ತಿರುವವರಿಗೆ ಒಳ್ಳೆಯ ಔಷಧಿ ಶುಂಠಿ ಹಾಕಿ ನೀರನ್ನು ಕುದಿಸಿ ಅದನ್ನು ಕುಡಿದರೆ ಮಲೇರಿಯಾ ಇರುವವರಿಗೆ ತುಂಬಾ ಒಳ್ಳೆಯ ಔಷಧಿ ಯಾಗಿ ಕಾರ್ಯ ನಿರ್ವಹಿಸುತ್ತದೆ.
ಮಲೇರಿಯಾದ ತೀವ್ರತೆ ಮತ್ತು ಲಕ್ಷಣಗಳನ್ನು ತುಳಸಿಯು ಕಡಿಮೆ ಮಾಡುತ್ತದೆ. ತುಳಸಿಯು ಮಲೇರಿಯಾ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ತುಳಸಿಯನ್ನು ಆಯುರ್ವೇದಲ್ಲಿ ಹೆಚ್ಚಾಗಿ ಔಷಧಿಯಾಗಿ ಬಳಸಿಕೊಳ್ಳಲಾಗುತ್ತದೆ. ತುಳಸಿ ಹಾಕಿದಂತಹ ಗಿಡಮೂಲಿಕೆ ಚಾ ತಯಾರಿಸಿಕೊಂಡು ಕುಡಿದರೆ ಅತ್ಯುತ್ತಮ ಲಾಭ ಸಿಗುತ್ತದೆ. ಸರಿಯಾದ ಕ್ರಮ ಮತ್ತು ಚಿಕಿತ್ಸೆಯಿಂದ ಮಲೇರಿಯಾವನ್ನು ತಡೆಯಬಹುದು ಮತ್ತು ಅದರಿಂದ ಮುಕ್ತಿ ಪಡೆಯಬಹುದು