ಕೆಎನ್‍ಎನ್‍ಡಿಜಿಟಲ್ ಡೆಸ್ಕ್  : ಆಸ್ಟ್ರೇಲಿಯಾದಲ್ಲಿ ಆರಂಭವಾದ ಟಿ20 ವಿಶ್ವಕಪ್ 2022 ಟೂರ್ನಿಯಲ್ಲಿ ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಸತತ ಮೂರು ಪಂದ್ಯಗಳಲ್ಲಿ ಕೆಲವೇ ರನ್ ಗಳಿಸಿ ಔಟಾಗಿದ್ರು. ಇದರಿಂದಾಗಿ ವ್ಯಾಪಕ ಟೀಕೆಗೂ ಗುರಿಯಾಗಿದ್ರು. ಆದ್ರೆ, ಇಂದು ಬಾಂಗ್ಲಾದೇಶ ವಿರುದ್ಧ ಬಲಿಷ್ಠ ಅರ್ಧಶತಕ ಬಾರಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಹೌದು, ಕೇವಲ 31 ಎಸೆತಗಳಲ್ಲಿ ರಾಹುಲ್ 50 ರನ್ ಗಳಿಸಿದ್ದಾರೆ. ಆದ್ರೆ, ಮುಂದಿನ ಎಸೆತದಲ್ಲಿಯೇ ಕ್ಯಾಚ್ ನೀಡಿದ್ರೂ ಖಂಡಿತವಾಗಿಯೂ ಭಾರತಕ್ಕೆ ಬಲಿಷ್ಠ ಆರಂಭ ನೀಡಿದರು.

2022ರ ಟಿ20 ವಿಶ್ವಕಪ್‌ನಲ್ಲಿ ಕೆಎಲ್ ರಾಹುಲ್ ವಿಫಲರಾಗಿದ್ದರು. ಟೂರ್ನಿಯಲ್ಲಿ ಆಡಿದ ಮೊದಲ 3 ಪಂದ್ಯಗಳಲ್ಲಿ ಅವ್ರು ಒಟ್ಟು 22 ರನ್ ಗಳಿಸಲಷ್ಟೇ ಶಕ್ತರಾದರು. ಓಪನರ್ ಆಗಿ ಬಂದರೂ ಅವ್ರು ಕೆಲವೇ ರನ್ ಗಳಿಸಿದ್ದಾರೆ ಎಂದ್ರೆ ಅವ್ರ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಪಾಕಿಸ್ತಾನ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಅವರು 8 ಎಸೆತಗಳಲ್ಲಿ 4 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇದಾದ ನಂತರ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ರಾಹುಲ್ 12 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿದ್ದರು. ಇಂದೂ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅವರ ಬ್ಯಾಟ್ ಮೌನವಾಗಿತ್ತು. ಈ ಪಂದ್ಯದಲ್ಲಿ ಅವರು 14 ಎಸೆತಗಳಲ್ಲಿ ಕೇವಲ 9 ರನ್ ಗಳಿಸಿ ಫಾರ್ಮ್‍ಗೆ ಮರಳಿದರು. ರಾಹುಲ್ ಅವರ ಕಳಪೆ ಫಾರ್ಮ್ ಭಾರತ ತಂಡದ ಚಿಂತೆಯನ್ನು ಹೆಚ್ಚಿಸುತ್ತಿದ್ದರೆ, ಇಂದು ಅವರು ಬಾಂಗ್ಲಾದೇಶ ವಿರುದ್ಧ ಅರ್ಧಶತಕ ಬಾರಿಸಿದ್ದಾರೆ. ಅವರು ಮೊದಲು ನಿಧಾನಗತಿಯಲ್ಲಿ ಆಡುತ್ತಿದ್ದರು. ಆದರೆ ಕೆಲವು ಬೌಂಡರಿಗಳ ನಂತರ ಅವರ ಆತ್ಮವಿಶ್ವಾಸ ಹೆಚ್ಚಿತು. ಅದ್ರಂತೆ, ಕೆಎಲ್ ರಾಹುಲ್ 31 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್’ಗಳನ್ನ ಹೊಡೆದು ಸ್ಕೋರ್‌ಬೋರ್ಡ್‌ಗೆ 50 ರನ್ ಸೇರಿಸಿದರು.

Share.
Exit mobile version