ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ಕಿಂಗ್ ಖಾನ್ ಶಾರುಖ್ ಖಾನ್ ಸಾಲು ಸಾಲು ಸೋಲಿನ ಬಳಿಕ ಮತ್ತೆ ಪುಟಿದೆದ್ದು ನಿಲ್ಲಲು ಅಣಿಯಾಗಿದ್ದಾರೆ. ಒಂದರ ಹಿಂದೊಂದರಂತೆ ಹೊಸ ಹೊಸ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶಾರುಖ್ ಗೆಲುವಿಗಾಗಿ ಕಾಲಿವುಡ್ ಖ್ಯಾತ ನಿರ್ದೇಶಕನ ಹಿಂದೆ ಬಿದ್ದು ಆಕ್ಷನ್ ಕಟ್ ಹೇಳಿಸಿಕೊಂಡಿರುವುದು ಹಳೇ ವಿಷ್ಯ. ಅವರೇ ಅಟ್ಲೀ..
ಬಿಗಿಲ್, ಬಿಗಿಲ್, ಮರ್ಸಲ್ ಸಿನಿಮಾಗಳ ಸೂತ್ರಧಾರ, ಕಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಹಾಗೂ ಶಾರುಖ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರ್ತಿದೆ. ಇದೇ ಮೊದಲ ಬಾರಿಗೆ ಅಟ್ಲೀ ಕಿಂಗ್ ಖಾನ್ ಗೆ ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗಷ್ಟೇ ಸೆಟ್ಟಿನಿಂದ ಒಂದಷ್ಟು ಫೋಟೋಗಳು ವೈರಲ್ ಆದ್ಮೇಲಂತೂ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿವೆ. ಆದ್ರೆ ಸಿನಿಮಾದ ಟೈಟಲ್ ಏನು ಅನ್ನೋದು ಇಲ್ಲಿವರೆಗೂ ಸಸ್ಪೆನ್ಸ್ ಆಗಿಯೇ ಉಳಿದಿತ್ತು. ಇದೀಗ ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ.
ಮೊದಲಿನಿಂದಲೂ ಶಾರುಖ್ ಸಿನಿಮಾಗೆ ಜವಾನ್ ಅನ್ನೋ ಟೈಟಲ್ ಫಿಕ್ಸ್ ಆಗಿದೆ ಎಂಬ ಸುದ್ದಿ ಹಬ್ಬಿತ್ತು. ಅದರಂತೆ ಚಿತ್ರತಂಡ ಅದೇ ಟೈಟಲ್ ನ್ನು ಫೈನಲ್ ಮಾಡಿದೆಯಂತೆ. ಒಂದು ಟೀಸರ್ ಝಲಕ್ ಮೂಲಕವೇ ಟೈಟಲ್ ಅನಾವರಣ ಮಾಡುವ ಯೋಜನೆ ಹಾಕಿಕೊಂಡಿರುವ ಚಿತ್ರತಂಡ ಶೀರ್ಘದಲ್ಲಿ ಶೀರ್ಷಿಕೆ ಬಿಡುಗಡೆ ಮಾಡಲಿದೆ ಎನ್ನಲಾಗ್ತಿದೆ. ಇನ್ನೂ ಶಾರುಖ್ ಡಬ್ಬಲ್ ರೋಲ್ ನಲ್ಲಿ ಸಿನಿಮಾದಲ್ಲಿ ನಟಿಸಲಿದ್ದು, ಕಿಂಗ್ ಖಾನ್ ಗೆ ಜೋಡಿಯಾಗಿ ಲೇಡಿಸೂಪರ್ ಸ್ಟಾರ್ ನಯನಾತಾರಾ ಮಿಂಚಲಿದ್ದಾರಂತೆ.