BIGG NEWS : ಕಿಲ್ಲರ್ ಕೋವಿಡ್ ಗೆ ಸಿಲಿಕಾನ್ ಸಿಟಿ ಶೇಕ್ : ಬೆಂಗಳೂರಿನಲ್ಲಿ ಇಂದು 3426 ಜನರಿಗೆ ಸೋಂಕು ಧೃಡ – Kannada News Now


State

BIGG NEWS : ಕಿಲ್ಲರ್ ಕೋವಿಡ್ ಗೆ ಸಿಲಿಕಾನ್ ಸಿಟಿ ಶೇಕ್ : ಬೆಂಗಳೂರಿನಲ್ಲಿ ಇಂದು 3426 ಜನರಿಗೆ ಸೋಂಕು ಧೃಡ

ಬೆಂಗಳೂರು : ಬೆಂಗಳೂರು ನಗರದಲ್ಲಿ ಇಂದು 3426 ಜನರಿಗೆ ಸೋಂಕು ತಗುಲಿದ್ದು, ಈ ಮೂಲಕ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 163631 ಕ್ಕೆ ಏರಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದು 3426 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ಮೂಲಕ ಇದುವರೆಗೆ 163631 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು 30 ಮಂದಿ ಸಾವನ್ನಪ್ಪಿದ್ದು, ಈ ಮೂಲಕ ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ 2370 ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು ಹೊಸದಾಗಿ 9,464 ಜನರಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,40,411ಕ್ಕೆ ಏರಿಕೆಯಾಗಿದೆ. ಇವರಲ್ಲಿ 3,34,99 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವುದರಿಂದ ರಾಜ್ಯದಲ್ಲಿ ಸಕ್ರೀಯ ಸೋಂಕಿತರ ಸಂಖ್ಯೆ 98,326 ಆಗಿದೆ.

ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ : ಸಂಜನಾಗಿಲ್ಲ ರಿಲೀಫ್ ; ಮೂರು ದಿನ ಸಿಸಿಬಿ ವಶಕ್ಕೆ ‘ಗಂಡ ಹೆಂಡತಿ’ ಬೆಡಗಿ




error: Content is protected !!