ಬೆಂಗಳೂರು : ಕಿಡ್ನಾಪ್ ಕೆಎಸ್ ನಲ್ಲಿ ಇದೀಗ ಮಾಡಿ ಸಚಿವ ಎಚ್ ಡಿ ರೇವಣ್ಣಗೆ ಬೆಂಗಳೂರಿನ 17ನೇ ಸೀಮ್ ಎಂ ನ್ಯಾಯಾಲಯವು 7 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಹೀಗಾಗಿ ಎಚ್ ಡಿ ರೇವಣ್ಣ ಅವರು ಕೋರ್ಟ್ ಹಾಲ್ ಇಂದ ಹೊರಗಡೆ ಬರಬೇಕಾದರೆ ಎಚ್ ಡಿ ರೇವಣ್ಣ ಕಣ್ಣೀರು ಹಾಕುತ್ತಾ ಹೊರ ಬರುತ್ತಿರುವುದು ಕಂಡುಬಂದಿತು.

ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂದು ಎಚ್ ಡಿ ರೇವಣ್ಣ ಅವರು ಬೆಂಗಳೂರಿನ 17ನೇ ಸಿ ಎಂ ಎಂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ರವೀಂದ್ರ ಬಿ.ಕಟ್ಟಿಮನಿ ಇದೀಗ ರೇವಣ್ಣ ಅವರಿಗೆ ಮೇ 14ರ ವರೆಗೆ ಅಂದರೆ 7 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದು, ಹೀಗಾಗಿ ರೇವಣ್ಣ ಪರಪ್ಪನ ಅಗ್ರಹಾರ ಸೇರಬೇಕಿದೆ.

ಎಚ್ ಡಿ ರೇವಣ್ಣ ಅವರ ಪರವಾಗಿ ಸಿರಿ ನಾಗೇಶ್ ವಾದ ಮಂಡಿಸಿದರೆ ಎಸ್ ಐ ಟಿ ಪರ ಜಗದೀಶ್ ಅವರು ವಾದ ಮಂಡಿಸಿದರು. ಈ ವೇಳೆ ಎಸ್‌ಐಟಿ ರೇವಣ್ಣ ವಿಚಾರಣೆಗೆ ಸಹಕರಿಸುತ್ತಿಲ್ಲ. ಅಲ್ಲದೆ ಸಾಕ್ಷ್ಯ ನಾಶ ಮಾಡುವ ಸಾಧ್ಯತೆಗಳಿವೆ. ಹೀಗಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಕೇಳಿದ್ದು, ನ್ಯಾಯಾಧೀಶರು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಇದೀಗ ಎ ಸೈಟ್ ಅಧಿಕಾರಿಗಳು ಮಾಜಿ ಸಚಿವ ಎಚ್ ಡಿ ರೇವಣ್ಣ ಅವರನ್ನ ಪರಪ್ಪನ ಅಗ್ರಹಾರದತ್ತ ಕರೆದುಕೊಂಡು ಹೋಗುತ್ತಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಮೇ 14ರವರೆಗೆ ಅಂದರೆ 7 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಿ ಎಂದು ಬೆಂಗಳೂರಿನ 17ನೇ ಎಸಿ ಎಂ ಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

Share.
Exit mobile version