ಚಂಡೀಗಢ: ಪಂಜಾಬ್‌ ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಗ್ಯಾಂಗ್‌ಸ್ಟರ್ ದೀಪಕ್ ಟಿನು ಪೊಲೀಸ್ ಕಸ್ಟಡಿಯಿಂದ ಪರಾರಿಯಾಗಿದ್ದಾನೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.

ಆರೋಪಿ ದೀಪಕ್ ಟಿನುವನ್ನು ಬಂಧಿಸಿ ದೆಹಲಿಯ ತಿಹಾರ್​ ಜೈಲಿನಲ್ಲಿ ಇರಿಸಲಾಗಿತ್ತು. ಹೆಚ್ಚಿ ವಿಚಾರಣೆಗಾಗಿ ಪೊಲೀಸರು ಜುಲೈ 4 ರಂದು ಪಂಜಾಬ್​ಗೆ ಕರೆತಂದು ಟ್ರಾನ್ಸಿಟ್​​ ರಿಮಾಂಡ್‌ನಲ್ಲಿ ಇರಿಸಿದ್ದರು. ಆದ್ರೆ, ಶನಿವಾರ ರಾತ್ರಿ ಎಸ್ಕೇಪ್‌ ಆಗಿದ್ದಾನೆ. ಟಿನು ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಆಪ್ತ ಸಹಾಯಕ ಹಾಗೂ ಸಿಧು ಕೊಲೆ ಪ್ರಕರಣದ ಆರೋಪಿಯೂ ಆಗಿದ್ದಾನೆ.

ಮೇ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಗಾಯಕ ಸಿಧು ಮೂಸೆವಾಲಾ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೂ 30 ಕ್ಕೂ ಹೆಚ್ಚು ಆರೋಪಿಗಳನ್ನು ಗುರುತಿಸಲಾಗಿದೆ. ಗ್ಯಾಂಗ್​ಸ್ಟರ್​ ಲಾರೆನ್​ ಬಿಷ್ಣೋಯ್‌ ಬಳಗದ ಆಪ್ತರು ಸೇರಿದಂತೆ 24 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ಟಿನು ಕೂಡ ಸೇರಿದ್ದಾನೆ.

BIGG NEWS : ಡಿ.ಕೆ.ಶಿವಕುಮಾರ್ ನಟನಾಗಿದ್ದರೆ `ಆಸ್ಕರ್’ ಪ್ರಶಸ್ತಿ ಪಡೆದುಕೊಳ್ಳಬಹುದಾಗಿತ್ತು : ಸಿ.ಟಿ. ರವಿ ವ್ಯಂಗ್ಯ

Watch Video: ತೆಲಂಗಾಣ ಸಿಎಂ ಕೆಸಿಆರ್ ಬೆಂಗಾವಲು ಪಡೆ ಕಾರಿನಿಂದ ಹೊರಬಿದ್ದ ಮಹಿಳಾ ಪೇದೆ… ಮುಂದೇನಾಯ್ತು ಇಲ್ಲಿ ನೋಡಿ

BIG NEWS: ʻಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿʼ ಅವರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

Share.
Exit mobile version