ಕೇರಳ: ಚಿತ್ರಮಂದಿರಗಳಲ್ಲಿ ವೀಕ್ಷಕರಿಗೆ, ಥಿಯೇಟರ್ ಗಳಿಗೆ ಮಕ್ಕಳನ್ನು ಕರೆ ತರುವ ತಾಯಂದಿರಿಗಾಗಿ ಕೇರಳ ಸರ್ಕಾರ ವಿನೂತನ ವ್ಯವಸ್ಥೆ ಮಾಡಿದೆ. ಸರ್ಕಾರ ನಡೆಸುತ್ತಿರುವ ಚಿತ್ರಮಂದಿರಗಳಲ್ಲಿ ಶಿಶುಗಳೊಂದಿಗೆ ಪೋಷಕರಿಗೆ ಧ್ವನಿ ನಿರೋಧಕ ‘ಅಳುವ ಕೋಣೆ’ (Crying Room) ಸ್ಥಾಪಿಸಿದೆ.

ಚಲನಚಿತ್ರದ ಪ್ರದರ್ಶನದ ಸಮಯದಲ್ಲಿ ಮಗು ಅಳುತ್ತಿದ್ದರೆ, ಪೋಷಕರು ತಮ್ಮ ಮಗುವನ್ನು ಕೋಣೆಗೆ ಕರೆದೊಯ್ಯಬಹುದು. ಸಿನಿಮಾವನ್ನು ಕೋಣೆಯ ಒಳಗಿನಿಂದ ಗಾಜಿನ ಕಿಟಕಿಯ ಮೂಲಕ ವೀಕ್ಷಿಸಬಹುದು. ಪೋಷಕರು ಅಥವಾ ಆರೈಕೆ ಮಾಡುವವರು ಚಲನಚಿತ್ರವನ್ನು ವೀಕ್ಷಿಸಲು ಕೊಠಡಿಯಲ್ಲಿ ಕೆಲವು ಆಸನ ವ್ಯವಸ್ಥೆ ಕೂಡ ಮಾಡಲಾಗಿದೆ. ಹೊಂ

ಈ ಕುರಿತಂತೆ ಕೇರಳದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ವಿಎನ್ ವಾಸವ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಅಳುವ ಕೋಣೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತಿರುವನಂತಪುರಂನಲ್ಲಿರುವ ಕೈರಳಿ-ಶ್ರೀ-ನೀಲಾ ಚಿತ್ರಮಂದಿರದ ಸಂಕೀರ್ಣದಲ್ಲಿ ಕೊಠಡಿಯನ್ನು ರಚಿಸಲಾಗಿದೆ.

ಮಕ್ಕಳೊಂದಿಗೆ ಥಿಯೇಟರ್‌ಗೆ ಬರುವ ಪೋಷಕರು ಚಲನಚಿತ್ರವನ್ನು ಆನಂದಿಸುವುದು ಬಹಳ ಅಪರೂಪ, ಮಕ್ಕಳು ಥಿಯೇಟರ್‌ನಲ್ಲಿನ ಕತ್ತಲೆ, ಧ್ವನಿ ಮತ್ತು ಬೆಳಕು ಹೊಂದಿಕೆಯಾಗದೆ ಥಿಯೇಟರ್‌ನಿಂದ ಹೊರಹೋಗಬೇಕಾದ ಪರಿಸ್ಥಿತಿಗಳು ಬರುತ್ತವೆ. ಇನ್ಮುಂದೆ ಸಿನಿಮಾ ನೋಡುವಾಗ ಮಗು ಅಳುತ್ತಿದ್ದರೆ ಥಿಯೇಟರ್‌ನಿಂದ ಹೊರಹೋಗುವ ಅಗತ್ಯವಿಲ್ಲ. ಸರ್ಕಾರಿ ಚಿತ್ರಮಂದಿರಗಳನ್ನು ಮಹಿಳಾ ಮತ್ತು ಮಕ್ಕಳ ಸ್ನೇಹಿಯಾಗಿ ಪರಿವರ್ತಿಸುವ ಅಂಗವಾಗಿ ಕೆಎಸ್‌ಎಫ್‌ಡಿಸಿ ತಿರುವನಂತಪುರಂ ಕೈರಲಿ ಥಿಯೇಟರ್ ಕಾಂಪ್ಲೆಕ್ಸ್‌ನಲ್ಲಿ ಕ್ರೈ ರೂಂ ಅನ್ನು ಸ್ಥಾಪಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಸೌಂಡ್ ಪ್ರೂಫ್ ಕ್ರೈ ರೂಮ್‌ನಲ್ಲಿ ತೊಟ್ಟಿಲು ಮತ್ತು ಡೈಪರ್ ಬದಲಾಯಿಸುವ ಸೌಲಭ್ಯವಿದೆ. ಜೊತೆಗೆ, ಮಗುವಿನೊಂದಿಗೆ ಕ್ರೈ ರೂಮ್‌ನಲ್ಲಿ ಯಾವುದೇ ತೊಂದರೆಯಿಲ್ಲದೆ ಚಲನಚಿತ್ರಗಳನ್ನು ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಈ ಉಪಕ್ರಮದ ಹಿಂದೆ ಕೆಲಸ ಮಾಡಿದ ಕೆಎಸ್‌ಎಫ್‌ಡಿಸಿಇಗೆ ಅಭಿನಂದನೆ ತಿಳಿಸಿದ್ದಾರೆ.

OMG : ಆನೆಗೆ ತಿನ್ನಲು ಕಬ್ಬು ಕೊಟ್ಟ ಲಾರಿ ಚಾಲಕನಿಗೆ ಬಿತ್ತು 75 ಸಾವಿರ ದಂಡ..!

‘ಜನಾರ್ಧನ ರೆಡ್ಡಿ’ ಸ್ನೇಹಕ್ಕೆ ಪ್ರಾಣ ಕೊಡುವ ವ್ಯಕ್ತಿ : ಸಚಿವ ಶ್ರೀರಾಮುಲು

Share.
Exit mobile version