ಕೇರಳ: ಇತ್ತೀಚಿಗೆ ಕೇರಳದ ವಧುವೊಬ್ಬಳು ʻತನ್ನ ಪತಿಗೆ ರಾತ್ರಿ 9 ಗಂಟೆಯವರೆಗೆ ಆತನ ಸ್ನೇಹಿತರೊಂದಿಗೆ ಕಾಲ ಕಳೆಯಲು ಮತ್ತು ಆ ಸಮಯದಲ್ಲಿ ತಾನು ಅವನಿಗೆ ಕರೆ ಮಾಡಿ ಡಿಸ್ಟರ್ಬ್‌ ಮಾಡುವುದಿಲ್ಲʼ ಎಂಬ ಅನುಮತಿ ನೀಡುವುದಾಗಿ ತಿಳಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದಾಳೆ. ಈ ಯೋಜನೆಯನ್ನು ಸ್ನೇಹಿತರು ರೂಪಿಸಿದ್ದಾರೆ.

ಯಾರಾದರೂ ಮದುವೆಯಾದ ನಂತರ, ವೈವಾಹಿಕ ಜೀವನವು ತನ್ನದೇ ಆದ ಆಲೋಚನೆಗಳಂತೆಯೇ ಇರಬೇಕು ಎಂದು ಬಯಸುತ್ತಾರೆ. ಆದ್ರೆ, ಸ್ನೇಹಿತರು ರೂಪಿಸಿದ ಯೋಜನೆಯಂತೆಯೇ 50 ರೂಪಾಯಿಗಳ ಸ್ಟ್ಯಾಂಪ್ ಪೇಪರ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದಾಳೆ.

ಈ ಒಪ್ಪಂದಕ್ಕೆ ಸಹಿ ಹಾಕಿದ ವಧು ಹೆಸರು ಅರ್ಚನಾ ಎಸ್. ಈಕೆ ʻಮದುವೆಯಾದ ನಂತರವೂ ನನ್ನ ಪತಿ ರಘು ಎಸ್ ಕೆಡಿಆರ್ ಅವರಿಗೆ ರಾತ್ರಿ 9 ಗಂಟೆಯವರೆಗೆ ಅವರ ಸ್ನೇಹಿತರೊಂದಿಗೆ ಸಮಯ ಕಳೆಯಲು ಅನುಮತಿ ನೀಡಲಾಗುವುದು ಮತ್ತು ಆ ಸಮಯದಲ್ಲಿ ನಾನು ಅವರಿಗೆ ಫೋನ್‌ನಲ್ಲಿ ತೊಂದರೆ ನೀಡುವುದಿಲ್ಲ ಎಂದು ಈ ಮೂಲಕ ಭರವಸೆ ನೀಡುತ್ತೇನೆʼ ಎಂದು ನವೆಂಬರ್ 5 ರಂದು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ನವೆಂಬರ್ 5 ರಂದು ಪಾಲಕ್ಕಾಡ್‌ನ ಕಂಜಿಕೋಡ್‌ನಲ್ಲಿ ದಂಪತಿಗಳು ವಿವಾಹವಾದರು. ರಘು ಅವರ ಸ್ನೇಹಿತರು ಅರ್ಚನಾಗೆ ಒಪ್ಪಂದವನ್ನು ಉಡುಗೊರೆಯಾಗಿ ನೀಡಿದರು. ಅದನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.

BIGG NEWS : ಅಲ್ಪಸಂಖ್ಯಾತ ಬಿ.ಎಡ್ ಹಾಗೂ ಡಿ.ಎಡ್ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ವಿಶೇಷ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

ಸಾಕು ಪ್ರಾಣಿಗಳಿಂದ ಸಾರ್ವಜನಿಕರಿಗೆ ತೊಂದರೆಯಾದ್ರೆ, ಮಾಲೀಕರಿಗೆ 10,000 ರೂ. ದಂಡ ವಿಧಿಸಲು ನಿರ್ಧಾರ… ಎಲ್ಲಿ ಗೊತ್ತಾ?

Eye Care Tips: ನಿಮ್ಮ ʻಕಣ್ಣಿನ ದೃಷ್ಟಿʼ ರಕ್ಷಣೆಗೆ ಈ ದೈನಂದಿನ ಅಭ್ಯಾಸಗಳನ್ನು ತಪ್ಪಿಸಿ

BIGG NEWS : ಅಲ್ಪಸಂಖ್ಯಾತ ಬಿ.ಎಡ್ ಹಾಗೂ ಡಿ.ಎಡ್ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ವಿಶೇಷ ಪ್ರೋತ್ಸಾಹಧನಕ್ಕಾಗಿ ಅರ್ಜಿ ಆಹ್ವಾನ

Share.
Exit mobile version