ಬೆಂಗಳೂರಿಗರ ಗಮನಕ್ಕೆ: ಕೆಂಗೇರಿ ವಿದ್ಯುತ್ ಚಿತಾಗಾರಾ ತಾತ್ಕಾಲಿಕವಾಗಿ ಸ್ಥಗಿತ

ಬೆಂಗಳೂರು: ನಾಳೆಯಿಂದ ಬೆಂಗಳೂರಿನ ರಾಜರಾಜೇಶ್ವರಿನಗರ ವಲಯದ ಕೆಂಗೇರಿ ವಿದ್ಯುತ್ ಚಿತಾಗಾರದಲ್ಲಿ ತುರ್ತು ನಿರ್ವಹಣೆ ಕೆಲಸದ ಪ್ರಯುಕ್ತ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯ ಕೆಂಗೇರಿ ವಿದ್ಯುತ್‌ ಚಿತಾಗಾರದಲ್ಲಿ ತುರ್ತ ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಬೇಕಾಗಿರುವುದರಿಂದ ದಿನಾಂಕ: 08-08-2024 ರಿಂದ 18- 08-2024 ವರೆವಿಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದ್ದು, ಈ ಚಿತಾಗಾರಕ್ಕೆ ಮೃತ ದೇಹಗಳನ್ನು ದಹನ ಕ್ರಿಯೆಗಾಗಿ ತರುವ ಸಾರ್ವಜನಿಕರು ಸಮೀಪದಲ್ಲಿರುವ ಸುಮ್ಮನಹಳ್ಳಿ, ಮೇಡಿ ಅಗ್ರಹಾರ ಅಥವಾ ಪೀಣ್ಯ ವಿದ್ಯುತ್ ಚಿತಾಗಾರವನ್ನು ಉಪಯೋಗಿಸಿಕೊಳ್ಳಬಹುದಾಗಿರುತ್ತದೆ ಎಂದು ವಿದ್ಯುತ್ ವಿಭಾಗದ ಕಾರ್ಯಪಾಲಕ ಅಭಿಯಂತರರು ಕೋರಿರುತ್ತಾರೆ. … Continue reading ಬೆಂಗಳೂರಿಗರ ಗಮನಕ್ಕೆ: ಕೆಂಗೇರಿ ವಿದ್ಯುತ್ ಚಿತಾಗಾರಾ ತಾತ್ಕಾಲಿಕವಾಗಿ ಸ್ಥಗಿತ