ಬೆಂಗಳೂರು : ಕೆಂಪೇಗೌಡರು ನಾಡಿನ ದೊರೆಯಾಗಿ ಮಾದರಿ ಆಡಳಿತ ಕೊಟ್ಟಿದ್ದಾರೆ. ಅವರು ಹುಟ್ಟಿನಿಂದ ರೈತ ಹಾಗೂಒಕ್ಕಲಿಗ ಸಮುದಾಯದಲ್ಲಿ ನೆಲೆಸಿದ್ದರು ಕೂಡ, ಅವರ ಆಡಳಿತ ದಿನಗಳಲ್ಲಿ ಯಾವುದೇ ಜಾತಿ ಧರ್ಮ ವಿಂಗಡಣೆ ಮಾಡತಕ್ಕಂಥ ಕೆಲಸ ಮಾಡಲಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಎಂದು ಕೆಂಪೇಗೌಡರ ಜಯಂತಿ ಉತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಈ ಒಂದು ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೆಂಪೇಗೌಡರು ಎಲ್ಲಾ ಜನಾಂಗದವರು ಹಾಗೂ ಎಲ್ಲಾ ಜಾತಿಯವರನ್ನು ಅಭಿವೃದ್ಧಿ ಪಡಿಸತಕ್ಕಂಥಹ ಕೆಲಸ ಮಾಡಿದರು ಬೆಂಗಳೂರು ಇಷ್ಟೊಂದು ಬೆಳೆಯುವುದಕ್ಕೆ ನಾಡಪ್ರಭು ಕೆಂಪೇಗೌಡರೇ ಕಾರಣ ಎಂದು ಅವರು ಕಾರ್ಯಕ್ರಮದಲ್ಲಿ ತಿಳಿಸಿದರು.

ಸಿಎಂ ಸ್ಥಾನ ಬಿಟ್ಟು ಕೊಡಿ : ಚಂದ್ರಶೇಖರಶ್ರೀ ಮನವಿ

ರಾಜ್ಯದಲ್ಲಿ ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಡಿ.ಕೆ. ಶಿವಕುಮಾರ್ ಮಾತ್ರ ಸಿಎಂ ಆಗಿಲ್ಲ. ಹೀಗಾಗಿ, ಸಿದ್ದರಾಂಯ್ಯ ಅವರು ತಮ್ಮ ಸಿಂಎಂ ಸ್ಥಾನವನ್ನು ಬಿಟ್ಟುಕೊಟ್ಟು ಡಿ.ಕೆ. ಶಿವಕುಮಾರ್ ಅವರ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಕೆಂಗೇರಿ ಆದಿಚುಂಚನಗಿರಿ ಶಾಖಾ ಮಠದ ಚಂದ್ರಶೇಖರ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ.

ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿ ಸರ್ಕಾರ ಅಧಿಕಾರಕ್ಕೆ ತರಲು ನಿಮ್ಮೊಂದಿಗೆ ಶ್ರಮಿಸಿದ ಡಿ.ಕೆ. ಶಿವಕುಮಾರ್ ಮಾತ್ರ ಈವರೆಗೆ ಸಿಎಂ ಆಗಿಲ್ಲ. ಸಿದ್ದರಾಮಯ್ಯ ದಯವಿಟ್ಟು ಡಿಕೆಶಿಗೆ ಅಧಿಕಾರ ಬಿಟ್ಟು ಕೊಡಬೇಕು. ಸಿದ್ದರಾಮಯ್ಯ ಅವರು ಮನಸ್ಸು ಮಾಡಿದ್ರೆ ಮಾತ್ರ ಇದು ಆಗುತ್ತದೆ. ವೇದಿಕೆಯಲ್ಲಿಯೇ ಸಿಎಂ ಸಿದ್ದರಾಮಯ್ಯಗೆ ನಾನು ಮತ್ತೊಮ್ಮೆ ನಮಸ್ಕಾರ ಮಾಡ್ತೀನಿ. ನೀವು ಡಿ.ಕೆ. ಶಿವಕುಮಾರ್ ಅವರನ್ನು ದಯವಿಟ್ಟು ಮುಖ್ಯಮಂತ್ರಿ ಮಾಡಿ ಎಂದು ಮನವಿಯನ್ನೂ ಮಾಡಿಕೊಂಡರು.

Share.
Exit mobile version