ಸುಭಾಷಿತ :

Tuesday, March 31 , 2020 4:34 AM

ಸರಿಗಮಪ ಸೀಸನ್ 15 ಕಿರೀಟ ಮುಡಿಗೇರಿಸಿಕೊಂಡ ಕೀರ್ತನ್ ಹೊಳ್ಳ


Sunday, February 24th, 2019 7:35 am

ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಸೀಸನ್ 15 ಗ್ರಾಂಡ್ ಫಿನಾಲೆ ನಡೆದಿದ್ದು ಚಾಂಪಿಯನ್ ಆಗಿ ಮಂಗಳೂರಿನ ಕೀರ್ತನ್ ಹೊಳ್ಳ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಕನ್ನಡದ ಜೀ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಬರುತ್ತಿರುವ ಸರಿಗಮಪ ಸೀಸನ್ 15 ಕಾರ್ಯಕ್ರಮದ ಫೈನಲ್ ನಲ್ಲಿ ತಮ್ಮ ಅದ್ಭುತ ಗಾಯನದ ಮೂಲಕ ಕೀರ್ತನ್ ಹೊಳ್ಳ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಪ್ರಶಸ್ತಿ ಗರಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಫೈನಲ್ ನಲ್ಲಿ ಕೀರ್ತನ್ ಹೊಳ್ಳ ಅವರಿಗೆ ಗ್ರಾಮೀಣ ಪ್ರತಿಭೆ ಹನುಮಂತ ಹಾಗೂ ಸಾದ್ವಿನಿ ತಮ್ಮ ಅದ್ಬುತ ಗಾಯನದ ಮೂಲಕ ತೀವ್ರ ಪೈಪೋಟಿ ನೀಡಿದರು. ಅಂತಿಮವಾಗಿ ಕೀರ್ತನ್ ಹೊಳ್ಳ ಚಾಂಪಿಯನ್ ಆಗಿದ್ದು, ಹನುಮಂತ ರನ್ನರ್ ಅಪ್ ಆಗಿದ್ದಾರೆ.ಜನರ ಟಿಂಗ್ ಆಧಾರ ಹಾಗೂ ತೀರ್ಪುಗಾರರ ವೋಟಿಂಗ್ ಎರಡನ್ನೂ ಗಮನದಲ್ಲಿಟ್ಟು, ಸೀಸನ್ 15 ರ ವಿನ್ನರ್ ಕೀರ್ತನ್ ಹೊಳ್ಳ ಎಂದು ಘೋಷಿಸಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions