ಶಿವಮೊಗ್ಗ : ಉಸ್ತುವಾರಿ ಜಿಲ್ಲೆ ಬದಲಾಯಿತು ಅಂದಾಕ್ಷಣ ಅಂದಾಕ್ಷಣ ಮಂಡ್ಯ ಜಿಲ್ಲೆ ಬಿಟ್ಟು ಕೊಡುವುದಿಲ್ಲ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ. ನಾರಾಯಣಗೌಡ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ನನ್ನದು ಇಬ್ಬರದ್ದು ಮಂಡ್ಯ ಜನ್ಮ ಭೂಮಿಯಾಗಿದೆ. ಮಂಡ್ಯವನ್ನು ನಾವು ನೋಡಿಕೊಳ್ಳುತ್ತೇವೆ. ಉಸ್ತುವಾರಿ ಜಿಲ್ಲೆ ಬದಲಾಯಿತು ಅಂದಾಕ್ಷಣ ಅಂದಾಕ್ಷಣ ಮಂಡ್ಯ ಜಿಲ್ಲೆ ಬಿಟ್ಟು ಕೊಡುವುದಿಲ್ಲ ಈ ಮೊದಲು ಮಂಡ್ಯ ಜಿಲ್ಲೆಯಲ್ಲಿ ಹತ್ತು ಗ್ರಾಮ ಪಂಚಾಯ್ತಿಯು ಕೂಡಾ ಗೆಲ್ಲುತ್ತಿರಲಿಲ್ಲ. ಆದರೆ ಈಗ 900ಕ್ಕೂ ಹೆಚ್ಚು ಗ್ರಾಮ ಪಂಚಾಯ್ತಿ ಸದಸ್ಯರನ್ನು ಗೆದ್ದಿದ್ದೇವೆ ಎಂದರು.
ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿ ಇದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರಿಬ್ಬರಿಗೆ ಅವರಿಗೆ ಮಾಡಲು ಕೆಲಸ ಇಲ್ಲ. ಹೀಗಾಗಿ ಏನೇನೋ ಹೇಳುತ್ತಿರುತ್ತಾರೆ. ನಮಗೆ ಮಾಡಲು ತುಂಬಾ ಕೆಲಸ ಇದೆ ಎಂದರು.