ಸುಭಾಷಿತ :

Wednesday, January 29 , 2020 9:36 PM

ಕನ್ನಡಿಗರ ಮನಗೆದ್ದ ರಿಷಬ್ ಶೆಟ್ಟಿಯ ಚೆಂದದ ‘ಕಥಾ ಸಂಗಮ’ 4 / 5


Saturday, December 7th, 2019 10:32 pm

ಸಿನಿಮಾ ಡೆಸ್ಕ್ :  ರಿಷಬ್ ಶೆಟ್ಟಿ ಯಾವುದೇ ಸಿನಿಮಾ ಅನೌನ್ಸ್ ಮಾಡಿದಾಗಲೂ ಅದು ಏನೋ ಹೊಸತನ ತುಂಬಿಕೊಂಡಿರುತ್ತದೆ ಎಂಬಂಥಾ ನಂಬಿಕೆ ಪ್ರೇಕ್ಷಕರಲ್ಲಿದೆ. ನಿರ್ದೇಶಕರಾಗಿ ಆಗಮಿಸಿ ಕಡಿಮೆ ಅವಧಿಯಲ್ಲಿಯೇ ಅಂಥಾದ್ದೊಂದು ಇಮೇಜು ಸೃಷ್ಟಿಸಿಕೊಳ್ಳುವಲ್ಲಿ ರಿಷಬ್ ಗೆದ್ದಿದ್ದಾರೆ. ಈ ಕಾರಣದಿಂದಲೇ ಅವರು ಕಥಾ ಸಂಗಮ ಎಂಬ ಚಿತ್ರದ ಸೂತ್ರ ಹಿಡಿದಿದ್ದಾರೆಂದು ಗೊತ್ತಾದಾಕ್ಷಣವೇ ವ್ಯಾಪಕವಾಗಿ ಸುದ್ದಿಯಾಗಿತ್ತು. ಆ ನಂತರ ಹೊರ ಬಿದ್ದಿದ್ದ ವಿಚಾರಗಳಂತೂ ಯಾರನ್ನೇ ಆದರೂ ಸೆಳೆಯುವಂತಿದ್ದವು. ಇದೀಗ ಅದೆಲ್ಲವನ್ನೂ ನ ಇಜವಾಗಿಸುವಂತೆ, ನೋಡಿದ ಪ್ರೇಕ್ಷಕರ ಅಭಿರುಚಿ ಎಂಥಾದ್ದೇ ಇದ್ದರೂ ಅವರೆಲ್ಲರೂ ಬೇಷರತ್ತಾಗಿ ಇಷ್ಟಪಡುವಂತೆಯೇ ಈ ಸಿನಿಮಾ ತೆರೆ ಕಂಡಿದೆ.

ಇದು ರಿಷಬ್ ಶೆಟ್ಟಿ ಏಳು ಮಂದಿ ಪ್ರತಿಭಾವಂತ ನಿರ್ದೇಶಕರೊಂದಿಗೆ ಸೃಷ್ಟಿಸಿರುವ ವಿಭಿನ್ನ ದೃಷ್ಯ ಕಾವ್ಯ. ಇಲ್ಲಿ ಏಳು ಮಂದಿ ನಿರ್ದೇಶಕರು ರೂಪಿಸಿರುವ ಏಳು ಥರದ ಕಥೆಗಳಿವೆ. ಅವೆಲ್ಲವೂ ಒಂದಕ್ಕೊಂದು ಸೂತ್ರ ಸಂಬಂಧವೇ ಇಲ್ಲದಂಥಾ ಚಹರೆ ಹೊಂದಿರುವಂಥವುಗಳು. ಆರಂಭದಲ್ಲಿ ಈ ಚಿತ್ರ ಅಪ್ಪ ಮಗಳ ನವಿರು ಭಾವಗಳನ್ನು ಹೊದ್ದುಕೊಂಡಂತಿರೋ ರೈನ್ ಬೋ ಎಂಬ ಕಥೆಯ ಮೂಲಕ ಆರಂಭವಾಗುತ್ತದೆ. ಆ ನಂತರ ಬಿಚ್ಚಿಕೊಳ್ಳುವ ಕಥೆಗಳು ಪ್ರೀತಿ, ಪ್ರೇಮ ಮತ್ತು ಮನುಷ್ಯನ ಒಳತೋಟಿಗಳನ್ನು ಅನಾವರಣಗೊಳಿಸುತ್ತವೆ. ಮತ್ತೊಂದು ಕಥೆ ಮತ್ತೊಂದು ವಿಶಿಷ್ಟ ಚಹರೆಯೊಂದಿಗೆ ತೆರೆದುಕೊಳ್ಳುತ್ತದೆ. ಈ ಎಲ್ಲ ಕಥೆಗಳೂ ಒಂದೊಂದು ಭಾವ ಲೋಕಕ್ಕೆ ನೋಡುಗರನ್ನೆಲ್ಲ ಕೊಂಡೊಯ್ಯುವಷ್ಟು ಶಕ್ತವಾಗಿ ಈ ಸಿನಿಮಾ ಮೂಡಿ ಬಂದಿದೆ.

ಈ ಏಳು ಕಥೆಗಳೂ ಕೂಡಾ ನೋಡುಗರನ್ನೆಲ್ಲ ಏಳೇಲು ಲೋಕದೊಳಗೆ ಸುತ್ತಾಡಿದಂಥಾ ಫೀಲ್ ಹುಟ್ಟಿಸುತ್ತವೆ. ಈ ಮೂಲಕ ಈ ಏಳೂ ಕಥೆಗಳ ನಿರ್ದೇಶಕರು ಕನ್ನಡ ಚಿತ್ರರಂಗದಲ್ಲಿ ಕಾಲೂರಿ ನಿಂತು ನೆಲೆ ಕಂಡುಕೊಳ್ಳುತ್ತಾgರೆಂಬ ಭರವಸೆ ಮೂಡಿಸುವಂತೆಯೇ ಈ ಸಿನಿಮಾವನ್ನು ರೂಪಿಸಿದ್ದಾರೆ. ಇನ್ನುಳಿದಂತೆ ಈ ಏಳೂ ಕಥೆಗಳ ಪಾತ್ರಗಳೂ ಕೂಡಾ ಅಷ್ಟೇ ರಸವತ್ತಾಗಿವೆ. ಒಂದು ಕೋನದಲ್ಲಿ ಚಿತ್ರವಿಚಿತ್ರದವುಗಳಂತೆಯೂ ಕಾಣಿಸುತ್ತವೆ. ಇದೆಲ್ಲವನ್ನೂ ಕುತೂಹಲ ಕಾಯ್ದಿಟ್ಟುಕೊಂಡು, ಯಾವುದು ಹೆಚ್ಚು, ಯಾವುದು ಕಡಿಮೆ ಎಂಬಂತೆ ಬೊಟ್ಟು ಮಾಡಲು ಸಾಧ್ಯವಾಗದಂತೆ ಕಟ್ಟಿ ಕೊಟ್ಟಿರುವ ರೀತಿಯೇ ಕಥಾ ಸಂಗಮದ ನಿಜವಾದ ಶಕ್ತಿ. ಇದು ಎಪ್ಪತ್ತರ ದಶಕದಲ್ಲಿಯೇ ಕನ್ನಡ ಚಿತ್ರರಂಗಕ್ಕೆ ಹೊಸ ದಿಕ್ಕು ತೋರಿದ್ದ ಪುಟ್ಟಣ್ಣ ಕಣಗಾಲರಿಗೆ ಗೌರವ ತುಂಬುವಂತೆ ಮೂಡಿ ಬಂದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions