ಬೆಂಗಳೂರು: ಇಂದು ರಾಜ್ಯದ ವಿವಿಧ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ನಡೆದ ಚುನಾವಣೆಯಲ್ಲಿ ಅನೇಕ ಕಡೆಯಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿದೆ. ಆದ್ರೇ.. ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯನ್ನು ಅನುಭವಿಸಿದೆ. ಮತ್ತೊಂದೆಡೆ ರಾಜ್ಯದ ಪ್ರಾದೇಶಿಕ ಪಕ್ಷವಾದಂತ ಜೆಡಿಎಸ್ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ನಡುವೆಯೂ ಮೂರನೇ ಶಕ್ತಿಯಾಗಿ ಪಕ್ಷೇತರರು ಮೇಲೆದ್ದು ನಿಂತಿದ್ದಾರೆ.
BIGG NEWS: ಫೆ.28ರವರೆಗೆ KSRTCಯಿಂದ ಪತ್ರಕರ್ತರಿಗೆ ನೀಡಿರುವ ‘ಬಸ್ ಪಾಸ್’ ಅವಧಿ ವಿಸ್ತರಣೆ
ಡಿಸೆಂಬರ್ 27ರಂದು ನಡೆದಿದ್ದಂತ ನಗರ ಸ್ಥಳೀಯ ಸಂಸ್ಥೆಗಳಾದಂತ 5 ನಗರಸಭೆ, 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯ್ತಿಗಳ ಫಲಿತಾಂಶ ಇಂದು ಘೋಷಣೆಯಾಗಿದೆ. ಈ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. 19 ಪುರಸಭೆಯ ಫಲಿತಾಂಶದಲ್ಲಿ 8 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿ 6, ಜೆಡಿಎಸ್ ಒಂದು ಕ್ಷೇತ್ರದಲ್ಲಿ ಜಯಗಳಿಸಿದೆ. ಇನ್ನೂ 4 ಕ್ಷೇತ್ರಗಳಲ್ಲಿ ಅತಂತ್ರ ಫಲಿತಾಂಶ ಹೊರಬಿದ್ದಿದೆ.
ಇನ್ನೂ 34 ಪಟ್ಟಣ ಪಂಚಾಯ್ತಿಗಳ ಚುನಾವಣಾ ಫಲಿತಾಂಶದಲ್ಲಿ 16 ಕಾಂಗ್ರೆಸ್ ಗೆಲುವು ಸಾಧಿಸಿದೆ. 6 ಬಿಜೆಪಿ, 16 ಪಕ್ಷೇತರರ ಪಾಲಾಗಿದೆ. ಒಂದೇ ಒಂದು ಪಟ್ಟಣ ಪಂಚಾಯ್ತಿಯಲ್ಲಿಯೂ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆದ್ದಿಲ್ಲ. ಅಂದಹಾಗೇ ಪಟ್ಟಣ ಪಂಚಾಯ್ತಿಗಳ 577 ವಾರ್ಡ್ ಗಳಲ್ಲಿ 236 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ. 194 ವಾರ್ಡ್ ನಲ್ಲಿ ಬಿಜೆಪಿ, 135ರಲ್ಲಿ ಪಕ್ಷೇತರು ಹಾಗೂ ಜಸ್ಟ್ 12 ವಾರ್ಡ್ ಗಳಲ್ಲಿ ಜೆಡಿಎಸ್ ಜಯಗಳಿಸಿದೆ.
PM-KISAN Scheme: ಹೊಸ ವರ್ಷಕ್ಕೆ ರೈತರಿಗೆ ಮೋದಿ ಗಿಫ್ಟ್: ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ಯ 10ನೇ ಕಂತಿನ ಹಣ ಬಿಡುಗಡೆ
ಇತ್ತ ಐದು ನಗರಸಭೆಗಳ ಪೈಕಿ 3 ಬಿಜೆಪಿ ಪಾಲಾದ್ರೇ.. 2 ನಗರಸಭೆಗಳು ಅಂತ್ರವಾದಂತ ಫಲಿತಾಂಶವನ್ನು ಕಂಡಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ, ತುಮಕೂರಿನ ಶಿರಾ ನಗರಸಭೆ ಫಲಿತಾಂಶವೇ ಅಂತ್ರವಾಗಿರೋದಾಗಿದೆ. 5 ನಗರಸಭೆಯ 166 ವಾರ್ಡ್ ಗಳಲ್ಲಿ ಬಿಜೆಪಿ 67 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿದ್ದರೇ, ಕಾಂಗ್ರೆಸ್ 61 ವಾರ್ಡ್, ಜೆಡಿಎಸ್ 12 ವಾರ್ಡ್ ನಲ್ಲಿ ಗೆಲುವು ಸಾಧಿಸಿದೆ. ಇದಲ್ಲದೇ 26 ವಾರ್ಡ್ ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆಲುವು ಕಂಡು ಮೂರನೇ ಶಕ್ತಿಯಾಗಿ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೂರನೇ ಶಕ್ತಿಯಾಗಿ ಹೊರ ಹೊಮ್ಮಿದ್ದಾರೆ.
HEALTH TIPS : ತ್ವಚೆಯ ಸೌಂದರ್ಯ ವೃದ್ಧಿಗೆ ಮನೆಯೊಳಗಿದೆ ಸಿಂಪಲ್ ಟಿಪ್ಸ್….
ಒಟ್ಟಾರೆಯಾಗಿ ಇಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಗಳಿಸಿದ್ರೇ, ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯನ್ನು ಅನುಭವಿಸಿದೆ. ಮತ್ತೊಂದೆಡೆ ರಾಜ್ಯದ ಪ್ರಾದೇಶಿಕ ಪಕ್ಷವಾದಂತ ಜೆಡಿಎಸ್ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳ ನಡುವೆಯೂ ಮೂರನೇ ಶಕ್ತಿಯಾಗಿ ಪಕ್ಷೇತರರು ಮೇಲೆದ್ದು ನಿಂತಿದ್ದಾರೆ. ಈ ಬಳಿಕ ಅಧಿಕಾರದ ಗದ್ದುಗೆಗಾಗಿ ಪಕ್ಷೇತರರನ್ನು ಆಪರೇಷನ್ ಕಮಲದ ಮೂಲಕ ಸೆಳೆಯೋ ಪ್ರಯತ್ನಕ್ಕೆ ಬಿಜೆಪಿ ಇಳಿಯಲಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.