BIG NEWS : ಜೂನ್.14ರ ನಂತ್ರ ರಾಜ್ಯದ 19 ಜಿಲ್ಲೆಗಳಲ್ಲಿ ಅನ್ ಲಾಕ್ ಜಾರಿ : ಯಾವುದಕ್ಕೆ ಅನುಮತಿ.? ಯಾವುದಕ್ಕಿಲ್ಲ.? ಇಲ್ಲಿದೆ ಮಾಹಿತಿ – #1 Latest News Updates Portal – 24×7 | Kannada News Now

Kannada news, Kannadanewsnow, News in Kannada, Kannada, ಕನ್ನಡ ವಾರ್ತೆಗಳು, ಕನ್ನಡ ಸುದ್ದಿಗಳು, kannada online news portal, Kannada news online, Movie News in Kannada, Sports News in Kannada, Business . politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

suvarna news live, public tv kannada news live, news18 kannada live, public news live, public tv news, tv5 kannada news live, yupptv kannada public tv live, btv kannada live, ಕನ್ನಡ ವಾರ್ತೆಗಳು, kannada online news, Kannada news online portal, Movie News in Kannada, Sports News in Kannada, Business news, politics News in Kannada, jobs News in Kannada, education News in Kannada, tourism News in Kannada, lifestyle News in Kannada, business News in Kannada

kannada news now, kannada news 24x7, online Kannada Newspaper, Online Kannada news portal, kannada live news updates, latest sandalwood cinema News, controversial news, gossips coverage in karnataka, gossips news in Kannada, all Kannada News updates, current Affairs in Karnataka, political news in kannada, news from india in Kannada language, Insurance, Gas/Electricity, Loans, Mortgage, Attorney, Lawyer , Donate, , Conference Call, Degree, Credit, credit card, car loans, home appliances, flipkart home appliances, flipkart , amazon home appliances, online shoping, cricket, onlinegame, medicare, weight loss, hairloss, helthtips, weight loss, online classes, Snapdeal., eBay, Myntra. Shopclues. breaking news, kannada latest news, kannada news, kannada news live, kannada online news, kannadanewsnow.com, kannadanewsnowdotcom, kanndanew newsnow dot com, karnataka latest news, karnataka news, latest news. indianews. Narendra Damodardas Modi, india breaking news, coronavirus, covid 19 india, yeddyurappa, siddaramaiah, Politicians in India, Current affairs, Elections, Political News, Current Affairs politics, Rahul Gandhi, Indian National Congress, Amit Shah, Bharatiya Janata Party, Priyanka Gandhi, Mamata Banerjee All India Trinamool Congress, Arvind Kejriwal, Aam Aadmi Party, Asaduddin Owaisi, All India Majlis-e-Ittehadul Muslimeen, Follow, H D Deve Gowda, Janata Dal (Secular), Harsh Vardhan, Bharatiya Janata Party, KCR, Telangana Rashtra Samithi, Kamal Hassan, Makkal Neethi, MaiamLal, Krishna, Advani, Bharatiya Janata Party, Mamata Banerjee All India Trinamool Congress, Manmohan Singh, Congress, mallikarjun kharge, Indian National Congress, Nirmala Sitharaman, Bharatiya Janata Party, Nitin Gadkari, Bharatiya Janata Party, Raj Thackeray, Maharashtra Navnirman Sena, Uma Bharti, Shivsena, V K Singh, General VK Singh, Sourav Ganguly, MS Dhoni , Virat Kohli, yogi, Adithyanath



CORONAVIRUS KARNATAKA State

BIG NEWS : ಜೂನ್.14ರ ನಂತ್ರ ರಾಜ್ಯದ 19 ಜಿಲ್ಲೆಗಳಲ್ಲಿ ಅನ್ ಲಾಕ್ ಜಾರಿ : ಯಾವುದಕ್ಕೆ ಅನುಮತಿ.? ಯಾವುದಕ್ಕಿಲ್ಲ.? ಇಲ್ಲಿದೆ ಮಾಹಿತಿ

ಬೆಂಗಳೂರು : ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಜೂನ್.14ರವರೆಗೆ ಜಾರಿಗೊಳಿಸಿದ್ದಂತ ಲಾಕ್ ಡೌನ್ ಅನ್ನು ರಾಜ್ಯ ಸರ್ಕಾರ ಕೆಲ ಜಿಲ್ಲೆಗಳಲ್ಲಿ ಮುಂದುವರೆಸಿ, ಮತ್ತೆ ಕೆಲ ಜಿಲ್ಲೆಗಳಲ್ಲಿ ಅನ್ ಲಾಕ್ ಘೋಷಿಸಿದೆ. ರಾಜ್ಯದ 11 ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರೆದಿದ್ದರೇ, 19 ಜಿಲ್ಲೆಗಳಲ್ಲಿ ಅನ್ ಲಾಕ್ ಘೋಷಣೆ ಮಾಡಲಾಗಿದೆ. ಹಾಗಾದ್ರೇ.. ಅನ್ ಲಾಕ್ ಜಿಲ್ಲೆಗಳಲ್ಲಿ ಯಾವುದಕ್ಕೆ ಅನುಮತಿ.? ಯಾವುದಕ್ಕೆ ಇಲ್ಲ ಎನ್ನುವ ಬಗ್ಗೆ ಮುಂದೆ ಓದಿ..

ವಾಹನ ಸವಾರರಿಗೆ ಮತ್ತೆ ಶಾಕ್ : ಇಂದು ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ, ಕಾಂಗ್ರೆಸ್ ನಿಂದ ಬೀದಿಗಿಳಿದು ಪ್ರತಿಭಟನೆ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿನ್ನೆ, ಜೂನ್.14ರವರೆಗೆ ರಾಜ್ಯದಲ್ಲಿ ಘೋಷಣೆ ಮಾಡಿದ್ದಂತ ಲಾಕ್ ಡೌನ್ ಅನ್ನು, 11 ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರೆಸಿದ್ದರೇ, 19 ಜಿಲ್ಲೆಗಳಲ್ಲಿ ಅನ್ ಲಾಕ್ ಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಅನ್ ಲಾಕ್ ಜಿಲ್ಲೆಗಳಲ್ಲಿ ಬೆಳಿಗ್ಗೆ 6 ರಿಂದ 10ರವರೆಗೆ ಇದ್ದಂತ ಅಗತ್ಯವಸ್ತು ಖರೀದಿ ಸಮಯವನ್ನು ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಿದ್ದಾರೆ. ಇದರ ಮಧ್ಯೆ ಅನ್ ಲಾಕ್ ಜಿಲ್ಲೆಗಳಲ್ಲಿ ಇದ್ದಂತ ಕೆಲ ನಿರ್ಬಂಧಗಳನ್ನು ತೆರವು ಗೊಳಿಸಿದ್ದಾರೆ.

ಅಗತ್ಯ ವಸ್ತು ಖರೀದಿಗೆ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ

ರಾಜ್ಯದಲ್ಲಿ ಅನ್ ಲಾಕ್ ಘೋಷಣೆ ಮಾಡಿರುವಂತ 19 ಜಿಲ್ಲೆಗಳಲ್ಲಿ, ಜನರಿಗೆ ಅಗತ್ಯ ವಸ್ತು ಖರೀದಿಗೆ ನೀಡಲಾಗಿದ್ದಂತ ಅವಕಾಶವನ್ನು ಸಿಎಂ ಯಡಿಯೂರಪ್ಪ ಹೆಚ್ಚಳಗೊಳಿಸಿದ್ದಾರೆ. ಅನ್ ಲಾಕ್ ಘೋಷಿಸಲಾಗಿರುವಂತ ಜಿಲ್ಲೆಗಳಲ್ಲಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ಆನಂತ್ರ ಕರ್ಪ್ಯೂ ಮುಂದುವರೆಯಲಿದೆ.

ರಾಜ್ಯದ ಜನರೇ ಗಮನಿಸಿ : ರಾಜ್ಯಾದ್ಯಂತ ‘KSRTC’, ‘BMTC’, ಖಾಸಗಿ ಬಸ್ ಸಂಚಾರ ನಿರ್ಬಂಧ

ಆಟೋ, ಟ್ಯಾಕ್ಸಿ ಸಂಚಾರಕ್ಕೆ ಅವಕಾಶ.. ಬಸ್ ಸಂಚಾರಕ್ಕೆ ನಿರ್ಬಂಧ

ಕೊರೋನಾ ನಿಯಂತ್ರಣ ಮಾರ್ಗಸೂಚಿ ಕ್ರಮದ ಅನ್ ಲಾಕ್ ಘೋಷಿತ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರವು ಆಟೋ, ಟ್ಯಾಕ್ಸಿ ಸಂಚಾರಕ್ಕೆ ಅವಕಾಶ ನೀಡಿದೆ. ಕೇವಲ ಇಬ್ಬರು ಪ್ರಯಾಣಿಕರನ್ನು ಕೂರಿಸಿಕೊಂಡು ಆಟೋ, ಟ್ಯಾಕ್ಸಿ ಸಂಚಾರ ಆರಂಭಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದ್ರೇ.. ಅನ್ ಲಾಕ್ ನಡುವೆಯೂ ಖಾಸಗಿ, ಸರ್ಕಾರಿ ಬಸ್ ಸಂಚಾರಕ್ಕೆ ಸರ್ಕಾರ ನಿರ್ಬಂಧ ಏರಿದೆ. ಹೀಗಾಗಿ ಜೂನ್ 14ರ ಸೋಮವಾರದಿಂದ ಅನ್ ಲಾಕ್ ಘೋಷಿಸಲ್ಪಟ್ಟಂತ ಜಿಲ್ಲೆಗಳಲ್ಲಿ ಆಟೋ, ಟ್ಯಾಕ್ಸಿ ಸಂಚಾರ ಆರಂಭಗೊಳ್ಳಲಿದೆ.

ರಾತ್ರಿ ಹಾಗೂ ವಾರಾಂತ್ಯ ಕರ್ಪ್ಯೂ ಜಾರಿ

ರಾಜ್ಯದ ಕೆಲ ಜಿಲ್ಲೆಗಳಲ್ಲಿ ಲಾಕ್, ಮತ್ತೆ ಕೆಲ ಜಿಲ್ಲೆಗಳಲ್ಲಿ ಅನ್ ಲಾಕ್ ಘೋಷಣೆಯಾಗಿದ್ದರೂ, ರಾತ್ರಿ ಹಾಗೂ ವಾರಾಂತ್ಯ ಕರ್ಪ್ಯೂ ಮುಂದುವರೆಯಲಿದೆ. ರಾತ್ರಿ ಕರ್ಪ್ಯೂ ಸಂಜೆ 7 ಗಂಟೆಯಿಂದ ಆರಂಭಗೊಂಡು, ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ. ಇದಲ್ಲದೇ ವಾರಾಂತ್ಯ ಕರ್ಪ್ಯೂ ಶುಕ್ರವಾರ ಸಂಜೆ 7 ಗಂಟೆಯಿಂದ ಆರಂಭಗೊಂಡು, ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿ ಇರಲಿದೆ. ಈ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧ ಇರಲಿದೆ.

ಅನ್ ಲಾಕ್ ನಿಂದ ಕೊರೊನಾ ಸೋಂಕು ಹೆಚ್ಚಳವಾದ್ರೆ ಕಠಿಣ ಕ್ರಮ : ಸಚಿವ ಸುಧಾಕರ್

ಮದ್ಯ ಪ್ರಿಯರಿಗೆ ಗುಡ್ ನ್ಯೂಸ್

ಕೊರೋನಾ ನಿಯಂತ್ರಣಕ್ಕಾಗಿ ಜೂನ್.14ರವರೆಗೆ ಜಾರಿಯಲ್ಲಿದ್ದಂತ ಲಾಕ್ ಡೌನ್ 11 ಜಿಲ್ಲೆಗಳಲ್ಲಿ ಮುಂದುವರೆದಿದ್ದು, 19 ಜಿಲ್ಲೆಗಳಲ್ಲಿ ಅನ್ ಲಾಕ್ ಗೊಳಿಸಲಾಗಿದೆ. ಅನ್ ಲಾಕ್ ಘೋಷಣೆ ಮಾಡಿರುವಂತ ಜಿಲ್ಲೆಗಳಲ್ಲಿ ಅಗತ್ಯ ವಸ್ತು ಖರೀದಿಗೆ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಿದಂತೆ, ಮದ್ಯ ಖರೀದಿಗೂ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಿದೆ. ಮಧ್ಯಾಹ್ನ 2 ಗಂಟೆಯವರೆಗೆ ಬಾರ್, ರೆಸ್ಟೋರೆಂಟ್, ವೈನ್ ಶಾಪ್ ಹಾಗೂ ಎಂಎಸ್ಐಎಲ್ ತೆರೆಯಲು ಅವಕಾಶ ನೀಡಿರುವ ಸರ್ಕಾರ, ಪಾರ್ಸಲ್ ಮೂಲಕ ಕೊಂಡೊಯ್ಯೋದಕ್ಕೆ ಅನುಮತಿಸಿ, ಮದ್ಯಪ್ರಿಯರಿಗೆ ಗುಡ್ ನ್ಯೂಸ್ ನೀಡಿದೆ.

ಒಟ್ಟಾರೆಯಾಗಿ ರಾಜ್ಯ ಸರ್ಕಾರ ಜೂನ್ 14ರ ನಂತ್ರ ಜಾರಿಗೊಳಿಸಿರುವಂತ 11 ಜಿಲ್ಲೆಗಳಲ್ಲಿ ಈ ಹಿಂದೆ ಇದ್ದಂತ ಲಾಕ್ ಡೌನ್ ಯಥಾಸ್ಥಿತಿ ಮುಂದುವರೆಯಲಿದೆ. ಮಿಕ್ಕುಳಿದಂತೆ 19 ಜಿಲ್ಲೆಗಳಲ್ಲಿ ಅನ್ ಲಾಕ್ ಆಗುವ ಮೂಲಕ, ಅಗತ್ಯ ವಸ್ತು ಖರೀದಿಗೆ ಹೆಚ್ಚುವರಿ ಸಮಯ, ಆಟೋ, ಟ್ಯಾಕ್ಸಿ ಸಂಚಾರಕ್ಕೆ ಅವಕಾಶ. ಮದ್ಯ ಪಾರ್ಸಲ್ ಗೂ 2 ಗಂಟೆಯವರೆಗೆ ಅನುಮತಿ ಸಿಗಲಿದೆ.

ವರದಿ : ವಸಂತ ಬಿ ಈಶ್ವರಗೆರೆ