ಬೆಂಗಳೂರು : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರು ಬದಲಾವಣೆ ಮಾಡಿ ರಾಜ್ಯ ಸರ್ಕಾರ ( Karnataka Govt)  ಆದೇಶ ಹೊರಡಿಸಿದೆ.

BIGG NEWS : ವರ್ಗಾವಣೆ ನಿರೀಕ್ಷೆಯಲ್ಲಿರುವ ಶಿಕ್ಷಕರಿಗೆ ಗುಡ್ ನ್ಯೂಸ್ : ಶೀಘ್ರವೇ ಸಾಮಾನ್ಯ ವರ್ಗಾವಣೆಗೆ ಅವಕಾಶ| Transfer of teachers

ಹೌದು, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರನ್ನು ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ’ ಎಂದು ಬದಲಾವಣೆ ಮಾಡಲಾಗಿದ್ದು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯ ಸಹ ಅಧಿಸೂಚನೆ ಪ್ರಕಟಿಸಿದೆ. ಮುಂದುವರೆದು, ಕಡತ, ಮೊಹರು, ಪತ್ರ ವ್ಯವಹಾರದಲ್ಲಿಯೂ ಹೊಸ ಹೆಸರು ಬಳಕೆ ಮಾಡುವಂತೆ ಸೂಚನೆ ನೀಡಲಾಗಿದೆ.

ಮಂಡಳಿ ನಿರ್ದೇಶಕರು ಹೆಚ್. ಎನ್. ಗೋಪಾಲಕೃಷ್ಣ ಈ ಕುರಿತು ಆದೇಶವನ್ನು ಹೊರಡಿಸಿದ್ದು, , ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಹೆಸರನ್ನು ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ’ ಎಂದು ಬದಲಾವಣೆ ಮಾಡಲಾಗಿದೆ, ಕಡತ, ಮೊಹರು, ಪತ್ರ ವ್ಯವಹಾರದಲ್ಲಿಯೂ ಹೊಸ ಹೆಸರು ಬಳಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಇನ್ನು ಮುಂದೆ ಈ ಕಚೇರಿಯಿಂದ ನಡೆಸುವ ಯಾವುದೇ ಪತ್ರ ವ್ಯವಹಾರ ಹಾಗೂ ಇನ್ನಿತರ ಕಡತಗಳಿಗೆ ಮೊಹರು ಹಾಕುವ ಸಂದರ್ಭದಲ್ಲಿ ‘’ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು 56003’’ ಎಂಬ ಹೆಸರಿನಲ್ಲಿ ವ್ಯವಹರಿಸಲು ಸೂಚಿಸಿದೆ.

Share.
Exit mobile version