ಸುಭಾಷಿತ :

Sunday, January 26 , 2020 12:38 AM

‘ಪರಿಶಿಷ್ಟ ವರ್ಗ’ಗಳ ವಿದ್ಯಾರ್ಥಿಗಳೇ ಗಮನಿಸಿ : ಮೆಟ್ರಿಕ್ ನಂತ್ರದ ‘ವಿದ್ಯಾರ್ಥಿ ವೇತನ’ಕ್ಕೆ ಅರ್ಜಿ ಆಹ್ವಾನ


Sunday, November 10th, 2019 11:37 am

ಬೆಂಗಳೂರು : ಪರಿಶಿಷ್ಯ ವರ್ಗದ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಕೊಡಮಾಡುವ 2019-20ನೇ ಸಾಲಿನ ಮೆಟ್ರಿಕ್ ನಂತ್ರದ ವಿದ್ಯಾರ್ಥಿ ವೇತನಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಇಂತಹ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30-11-2019 ಆಗಿರುತ್ತದೆ.

ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿವರ್ಷ ನೀಡಲಾಗುವ ಮೆಟ್ರಿಕ್ ನಂತ್ರದ ವಿದ್ಯಾರ್ಥಿ ವೇತನಕ್ಕೆ 2019-20ನೇ ಸಾಲಿನ ಅರ್ಜಿಯನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಆಹ್ವಾನಿಸಿದೆ. ದಿನಾಂಕ 01-11-2019ರಿಂದ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, 30-11-2019ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ.

ಈ ಹಿನ್ನಲೆಯಲ್ಲಿ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತ್ರದ ವಿದ್ಯಾರ್ಥಿಗಳು ಆನ್ ಲೈನ್ ಜಾಲತಾಣ http://ssp.postmatric.karnataka.gov.in ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 080-44554455 ಅಥವಾ 080-2261789 ಗೆ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದಾಗಿದೆ.

ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹತೆಗಳು

ಮಾನ್ಯತೆ ಪಡೆದ ಮೆಟ್ರಿಕ್ ನಂತರದ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ವಿದ್ಯಾರ್ಥಿಯ ಪೋಷಕರ ಕುಟುಂಬದ ಆದಾಯಮಿತಿ ವಾರ್ಷಿಕ ರೂ.2.50 ಲಕ್ಷಗಳ ಮಿತಿಯೊಳಗೆ ಇರತಕ್ಕದ್ದು ವಿದ್ಯಾರ್ಥಿಯು ಮುಂದಿನ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಹೊಂದಿರತಕ್ಕದ್ದು

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಯು ಅರ್ಜಿಯನ್ನು http://ssp.postmatric.karnataka.gov.in ವೆಬ್ ಸೈಟ್ ತೆರೆದು, State Scheme ಲಿಂಕ್ ನಡಿ ದೊರಕುವ Karnataka- POST MATRIC SCHOLARSHIP(PMS) FOR ST STUDENTS-KARNATAKA ಸ್ಕೀಮ್ ನ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸುವುದು
ನವೀಕರಣ ವಿದ್ಯಾರ್ಥಿಗಳು ಸಹ 2019-20ನೇ ಸಾಲಿಗೆ ಹೊಸದಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು

ಅರ್ಜಿಯ ಜೊತೆಗೆ ಸಲ್ಲಿಸಬೇಕಾಗಿರುವ ದಾಖಲೆಗಳು

ನಿಮ್ಮ ಆಧಾರ್ ವಿವರಗಳು ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನಿಮ್ಮ ಎಸ್ ಎಸ್ ಪಿ ಖಾತೆಯನ್ನು ರಚಿಸಿ
ನಿಮ್ಮ ಕಾಲೇಜು ಮತ್ತು ಕೋರ್ಸ್ ನ ವಿವರವನ್ನು ಆಯ್ಕೆ ಮಾಡಿ
ನಿಮ್ಮ ಪೋಷಕ/ಪಾಲಕರ ಆಧಾರ್ ವಿವರವನ್ನು ನಮೂದಿಸಿ
ನಿಮ್ಮ ಜಾತಿ, ಆದಾಯ ಪ್ರಮಾಣ ಪತ್ರದ ಆರ್ ಡಿ ಸಂಖ್ಯೆಯನ್ನು ನಮೂದಿಸಿ
ನಿಮ್ಮ ಇ-ದೃಢೀಕರಿಸಲಾದ ದಾಖಲೆಗಳ ಸಂಖ್ಯೆಯನ್ನೂ ನಮೂದಿಸಿ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions