ಸುಭಾಷಿತ :

Tuesday, April 7 , 2020 6:27 PM

‘ಪಿಯು ಪರೀಕ್ಷೆ’ಯ ಅಕ್ರಮ ತಡೆಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ‘ಮಾಸ್ಟರ್ ಪ್ಲಾನ್’


Monday, February 24th, 2020 6:32 pm

ಬೆಂಗಳೂರು : ದ್ವಿತೀಯ ಪಿಯುಸಿಯ ಪರೀಕ್ಷಾ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಹೊಸ ಹೆಜ್ಜೆ ಇರಿಸುತ್ತಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ, ಇದೀಗ ಮತ್ತೊಂದು ಹೊಸ ಮಾಸ್ಟರ್ ಪ್ಲಾನ್ ರೂಪಿಸಿದೆ. ವಿದ್ಯಾರ್ಥಿಗಳು ಬರೆಯುವ ಉತ್ತರ ಪತ್ರಿಕೆ ಮುಕ್ತಾಯದ ನಂತ್ರದ ಖಾಲಿ ಪುಟದಲ್ಲಿ ಸೀಲ್ ಹಾಗಿ, ಇಲ್ಲಿಗೆ ಮುಕ್ತಾಯವಾಗಿ ಎಂಬುದಾಗಿ ಸೀಲ್ ಹಾಕಿ ಕ್ಲೋಸ್ ಮಾಡುವ ವಿನೂತನ ಪದ್ದತಿಯನ್ನು ಈ ಬಾರಿ ಜಾರಿಗೆ ತರುತ್ತಿದೆ. ಹೀಗಾಗಿ ಪರೀಕ್ಷಾ ನಂತ್ರವೂ ಉತ್ತರ ಪತ್ರಿಕೆಯ ಮೂಲಕ ನಡೆಯುತ್ತಿದ್ದ ಅಕ್ರಮಕ್ಕೆ, ಇದೀಗ ಕಡಿವಾಣ ಬೀಳಲಿದೆ.

ದ್ವಿತೀಯ ಪಿಯುಸಿ ಪರೀಕ್ಷೆ ದಿನಾಂಕ ಸಮೀಪಿಸುತ್ತಿದೆ. ವಿದ್ಯಾರ್ಥಿಗಳು ಕೂಡ ಪರೀಕ್ಷಾ ತಯಾರಿನಡೆಸುತ್ತಿದ್ದಾರೆ. ಇತ್ತ ಪದವಿ ಪೂರ್ವ ಶಿಕ್ಷಣ ಇಲಾಖೆ ಪರೀಕ್ಷಾ ಸಿದ್ಧತೆಯನ್ನು ಅಂತಿಮ ಹಂತದಲ್ಲಿ ಮಾಡಿಕೊಂಡಿದೆ. ಇದೇ ಮೊದಲ ಬಾರಿಗೆ ಪರೀಕ್ಷಾ ನಂತ್ರದ ಅಕ್ರಮಗಳ ತಡೆಗೆ ಇಲಾಖೆ ಮಾಸ್ಟರ್ ಪ್ಲಾನ್ ರೂಪಿಸಿದೆ. ವಿದ್ಯಾರ್ಥಿಗಳು ಎಷ್ಟೇ ಉತ್ತರ ಪತ್ರಿಕೆ ಪಡೆದು, ತಮ್ಮ ಉತ್ತರವನ್ನು ಬರೆದು ಮುಗಿಸಿದ ನಂತ್ರ, ಕೊನೆಗೆ THE END ಎನ್ನುವಂತ ಸೀಲ್ ಹಾಕಿ, ಮುಕ್ತಾಯಗೊಳಿಸಲು ಸೂಚಿಸಿದೆ.

ಈ ಸಂಬಂಧ ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಿಗೂ ಸೂಚನೆ ನೀಡಿರುವ ಇಲಾಖೆ, ಅದಕ್ಕೆ ಬೇಕಾದಂತ ಒಂದೇ ಮಾದರಿಯ ಸೀಲ್ ಗಳನ್ನು ಕೂಡ ರವಾನಿಸಿದೆ. ಇಂತಹ ಸೀಲ್ ಗಳನ್ನು ಬಳಸಿ, ಕೊಠಡಿಯ ಮೇಲ್ವಿಚಾರಕರು ಪರೀಕ್ಷೆ ಮುಗಿದ ನಂತ್ರ, ವಿದ್ಯಾರ್ಥಿಗಳು ಉತ್ತರ ಪತ್ರಿಕೆ ನೀಡಿದ ಮೇಲೆ, ಆನ್ಸರ್ ಶೀಟ್ ಕೊನೆಯ ಪುಟದಲ್ಲಿ ದಿ ಎಂಡ್ ಎಂಬುದಾಗಿ ಸೀಲ್ ಹಾಕಬೇಕು. ಅಲ್ಲದೇ ಸೀಲ್ ಕೆಳಗೆ ಕೊಠಡಿಯ ಮೇಲ್ವಿಚಾರಕರ ಸಹಿ ಮಾಡಿ ನೀಡುವಂತೆ ಸೂಚಿಸಿದೆ.

ಅಂದಹಾಗೇ ಇಂತಹ ವಿನೂತನ ಮಾಸ್ಟರ್ ಪ್ಲಾನ್ ಮಾಡಿದ್ದರ ಹಿಂದೆ, ಪರೀಕ್ಷೆಯ ನಂತ್ರ ಉಳಿದ ಆನ್ಸರ್ ಶೀಟ್ ಬಳಸಿಕೊಂಡು, ನಡೆಯಬಹುದಾದ ಅಕ್ರಮವನ್ನು ತಡೆಗಟ್ಟುವುದೇ ಆಗಿದೆ. ಹೀಗೆ ದಿ ಎಂಡ್ ಎಂಬಂತ ಶೀಲ್ ಹಾಕಿ, ಕೊಠಡಿಯ ಮೇಲ್ವಿಚಾರಕರ ಸಹಿ ಮಾಡಿದ್ರೆ.. ಆನಂತ್ರ ಏನೇ ಉತ್ತರ ಪತ್ರಿಕೆಯಲ್ಲಿ ಅಕ್ರಮ ನಡೆದಿದ್ದರು, ಇದೀಗ ಸಿಕ್ಕಿ ಬೀಳುವ ಚಾನ್ಸ್ ಇದೆ. ಆದ್ರೇ ಪದವಿ ಪೂರ್ವ ಶಿಕ್ಷಣ ಇಲಾಖೆಯ ಈ ಮಾಸ್ಟರ್ ಪ್ಲಾನ್ ವರ್ಕೌಟ್ ಆಗುತ್ತಾ..? ಪರೀಕ್ಷಾ ನಂತ್ರದ ಅಕ್ರಮಕ್ಕೆ ಕಡಿವಾಣ ಬೀಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions