ಸುಭಾಷಿತ :

Saturday, December 7 , 2019 6:59 PM

ರಾಜ್ಯ ಸರ್ಕಾರದಿಂದ ಪೊಲೀಸರಿಗೆ ಭರ್ಜರಿ ಸಿಹಿಸುದ್ದಿ : 15 ಸಾಂದರ್ಭಿಕ ರಜೆಗೆ ಸಿಎಂ ಒಪ್ಪಿಗೆ


Thursday, December 5th, 2019 6:08 am

ಬೆಂಗಳೂರು : ರಾಜ್ಯ ಸರ್ಕಾರವು ಪೊಲೀಸರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 15 ರಿಂದ 10 ದಿನಕ್ಕೆ ಕಡಿತಗೊಳಿಸಿದ್ದ ಸಾಂದರ್ಭಿಕ ರಜೆಗಳನ್ನು ಶಿಕ್ಷಣ, ಆರೋಗ್ಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿಗೆ ಮಾತ್ರ ಅನ್ವಯಿಸುವಂತೆ ಮತ್ತೆ 15 ದಿನಕ್ಕೆ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರಸ್ತಾವನೆ ಮೇರೆಗೆ ಶಿಕ್ಷಣ ಮತ್ತು ಆರೋಗ್ಯ ಇಲಾಖೆ ನೌಕರರಿಗೆ ಮಾತ್ರ 15 ದಿನ ಸಾಂದರ್ಭಿಕ ಮತ್ತು 2 ದಿನ ಪರಿಮಿತ ರಜೆಯನ್ನು ಹೆಚ್ಚಿಸಲು ನವೆಂಬರ್ 30 ರಂದು ಸಿಎಂ ಬಿ.ಎಸ್.ಯಡಿಯೂರಪ್ಪ ಆದೇಶಿಸಿದ್ದರು.

ಆದರೆ ಪೊಲೀಸರಿಗೆ ರಜೆ ದಿನಗಳನ್ನು ಹೆಚ್ಚಿಸದಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರಿಗೂ 15 ಸಾಂದರ್ಭಿಕ, 2 ಪರಿಮಿತ ರಜೆ ಮುಂದುವರೆಸುವಂತೆ ಸಿಎಂಗೆ ಪ್ರಸ್ತಾವನೆ ಸಲ್ಲಿಸಿದ್ದರು. ಇದೀಗ ರಜೆ ಹೆಚ್ಚಿಸಲು ಸಿಎಂ ಒಪ್ಪಿಗೆ ಸೂಚಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions