ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 2026 ರ ಕ್ಯಾಲೆಂಡರ್ ಬಿಡುಗಡೆ

ಬೆಂಗಳೂರು: ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 2026 ರ ನೂತನ ಕ್ಯಾಲೆಂಡರನ್ನು ಇಂದು ಕ್ವೀನ್ಸ್ ರಸ್ತೆಯ ಸಂಘದ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ್ ಪಾಳ್ಯ ಕ್ಯಾಲೆಂಡರ್ ಬಿಡುಗಡೆ ಮಾಡಿದರು. ಖಜಾಂಚಿ ಮೋಹನ್ ಕುಮಾರ್, ಹಿರಿಯ ನಿರ್ದೇಶಕರಾದ ಆನಂದ್ ಪಿ ಬೈದನಮನೆ, ರಮೇಶ್ ಹಿರೇಜಂಬೂರು, ಕೆ.ವಿ. ಪರಮೇಶ್, ಧ್ಯಾನ್ ಪೂಣಚ್ಚ, ಕಾರ್ಯದರ್ಶಿ ರಘು ಮತ್ತಿತರರು ಉಪಸ್ಥಿತರಿದ್ದರು.