ಸುಭಾಷಿತ :

Monday, February 24 , 2020 3:03 AM

ಜನಪ್ರತಿನಿಧಿಗಳ ಖಾಸಗಿ ವಾಹನಗಳ ಮೇಲೆ ನಾಮಫಲಕ ಬೇಡ : ಹೈಕೋರ್ಟ್


Thursday, January 23rd, 2020 7:19 am

ಬೆಂಗಳೂರು : ಶಾಸಕರು, ಸಂಸದರು ಸೇರಿದಂತೆ ಯಾವುದೇ ಜನಪ್ರತಿನಿಧಿಗಳು ಖಾಸಗಿ ವಾಹನಗಳ ಮೇಲೆ ತಮ್ಮ ಹುದ್ದೆ, ಸರ್ಕಾರಿ ಲಾಂಛನದ ನಾಮಫಲಕ ಅಳವಡಿಸದಂತೆ ಕ್ರಮ ಜರುಗಿಸಬೇಕೆಂದು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳು ಅಥವಾ ನ್ಯಾಯಿಕ ಸಂಸ್ಥೆಗಳ ಹೆಸರು, ಲಾಂಛನ ಚಿಹ್ನೆಗಳನ್ನು ಹೋಲುವಂತಹ ಫಲಕಗಳನ್ನು ಖಾಸಗಿ, ಸಂಸ್ಥೆಗಳ ವಾಹನಗಳ ಮೇಲೆ ಅಳವಡಿಸಬಾರದು, ಈ ನಿಯಮ ಉಲ್ಲಂಘಿಸಿದ ವಾಹನಗಳ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹೈಕೋರ್ಟ್ ನಿರ್ದೇಶಿಸಿದೆ.

ನ್ಯಾ. ಆರ್. ದೇವದಾಸ್ ಅವರ ಈ ಪೀಠವು ಸೂಚನೆ ನೀಡಿದ್ದು, ಜನಪ್ರತಿನಿಧಿಗಳು ತಮ್ಮ ಖಾಸಗಿ ವಾಹನಗಳ ಮೇಲೆ ಹೆಸರು, ಹುದ್ದೆ ಸರ್ಕಾರಿ ಲಾಂಛನ, ಚಿಹ್ನೆ ಅಳವಡಿಸಿಕೊಂಡಿರುವುದು ಕಂಡುಬಂದಿವೆ ಹೀಗಾಗಿ ಅವುಗಳನ್ನು ತೆಗೆದುಹಾಕಬೇಕು ಎಂದು ಹೇಳಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions