ಬೆಂಗಳೂರು: ಹುಲಿ ಚರ್ಮ, ಉಗುರು ಮಾರಾಟ ಮಾಡುತ್ತಿದ್ದಂತ ವ್ಯಕ್ತಿಯನ್ನು ಪ್ರಕರಣ ಸಂಬಂಧ ಬಂಧಿಸಿದ್ದಲ್ಲದೇ, ಆ ಬಂಧನವನ್ನೇ ಕಿಡ್ನಾಪ್ ಎಂಬುದಾಗಿ ನಾಟಕವಾಡಿ, ಲಕ್ಷ ಲಕ್ಷ ಹಣಕ್ಕೂ ಪೊಲೀಸರೇ ಬೇಡಿಕೆ ಇಟ್ಟಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಮೂಲಕ ರಾಜ್ಯದ ಪೊಲೀಸರೇ ( Karnataka Police ) ತಲೆ ತಗ್ಗಿಸುವಂತ ಘಟನೆ ನಡೆದಿದೆ.
ಬೆಂಗಳೂರಿನ ಮಾರತಹಳ್ಳಿ ಠಾಣೆಯ ಪೊಲೀಸರು ಹುಲಿ ಚರ್ಮ, ಉಗುರು ಸಂಬಂಧ ವ್ಯಕ್ತಿಯೊಬ್ಬನನ್ನು ಕರೆದೊಯ್ದಿದ್ದರು. ವಿಚಾರಣೆ ನಡೆಸಿ ಪ್ರಕರಣ ಸಂಬಂಧ ತನಿಖೆ ಕೈಗೊಂಡು, ಕಾನೂನು ಕ್ರಮ ಕೈಗೊಳ್ಳಬೇಕಾಗಿದ್ದ ಪೊಲೀಸರೇ ಹಾಡಿದ್ದು ಮಾತ್ರ ಕಿಡ್ನಾಪ್ ನಾಟಕ. ವ್ಯಕ್ತಿಯಿಂದಲೇ ಮನೆಯವರಿಗೆ ಕರೆ ಮಾಡಿಸಿ, ನನ್ನನ್ನು ಕಿಡ್ನಾಪ್ ಮಾಡಲಾಗಿದೆ. 40 ಲಕ್ಷ ಹಣ ಕೊಟ್ಟರೇ ಮಾತ್ರವೇ ಬಿಡಲಿದ್ದಾರೆ ಎಂಬುದಾಗಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.
ಆದ್ರೇ ಮಾರತಹಳ್ಳಿ ಇಬ್ಬರು ಪೊಲೀಸರೇ ವಿಚಾರಣೆಗಾಗಿ ತಮ್ಮ ಸಂಬಂಧಿಯನ್ನು ಕರೆದುಕೊಡು ಹೋಗಿದ್ದಂತ ತಿಳಿದ ಕಾರಣ, ಕಿಡ್ನಾಪ್ ಸಂಬಂಧ ಬಾಗಲೂರು ಪೊಲೀಸ್ ಠಾಣೆಗೆ ಅಪಹರಣ ದೂರನ್ನು ಸಂಬಂಧಿಕು ನೀಡಿದ್ದಾರೆ. ಈ ದೂರು ಆಧರಿಸಿ ತನಿಖೆಗೆ ಇಳಿದಂತ ಬಾಗಲೂರು ಠಾಣೆಯ ಪೊಲೀಸರಿಗೆ ಮಾರತಹಳ್ಳಿ ಪೊಲೀಸರೇ ಕಿಡ್ನಾಪ್ ಮಾಡಿರೋದಾಗಿ ತಿಳಿದು ಬಂದಿದೆ.
ಕೂಡಲೇ ಈ ವಿಷಯವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಗಮನಕ್ಕೆ ತಂದಿದ್ದಾರೆ. ವಿಷಯ ತಿಳಿದಂತ ಕಮೀಷನರ್ ಕೂಡಲೇ ಅವರನ್ನು ಬಂಧಿಸುವಂತೆ ಸೂಚಿಸಿದ್ದಾರೆ. ಕಮೀಷನರ್ ಸೂಚನೆಯ ಮೇರೆ ತನಿಖೆ ಚುರುಕುಗೊಳಿಸಿದಂತ ಪೊಲೀಸರು, ಕಿಡ್ನಾಪ್ ಮಾಡಿದ್ದಂತ ಮಾರತಹಳ್ಳಿ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಹರೀಶ್ ಎಂಬಾತನನ್ನು ಬಂಧಿಸಿದ್ದಾರೆ.
ಇನ್ನೂ ಇದೇ ಪ್ರಕರಣದಲ್ಲಿ ಆರೋಪಿಯ ತಲೆಗೆ ಗನ್ ಇಟ್ಟು ಮನೆಯವರಿಗೆ ಕಿಡ್ನಾಪ್ ಮಾಡಲಾಗಿದೆ, 40 ಲಕ್ಷ ಹಣ ತಂದ್ರೇ ಮಾತ್ರ ಬಿಡೋದಾಗಿ ಹೇಳಿಸಿದ್ದಂತ ಮಾರತಹಳ್ಳಿ ಠಾಣೆಯ ಪಿಎಸ್ಐ ರಂಗೇಶ್, ಮತ್ತೆ ಮೂವರು ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆ ಹಚ್ಚುವ ಕೆಲಸವನ್ನು ಬಾಗಲೂರು ಠಾಣೆಯ ಪೊಲೀಸರು ನಡೆಸುತ್ತಿದ್ದಾರೆ.
BIGG NEWS : ಕುತೂಹಲ ಮೂಡಿಸಿದ ಸಿದ್ದರಾಮಯ್ಯ ಕ್ಷೇತ್ರ : ಮಾ.24 ರಂದು ‘ಬಾದಾಮಿ ಟೂರ್’ ಫಿಕ್ಸ್ |Election 2023