ಬೆಂಗಳೂರು : ಸಾಮಾನ್ಯ ಪ್ರವೇಶ ಪರೀಕ್ಷೆ ಸಿಇಟಿ 2022 (CET 2022) ಪರಿಷ್ಕೃತ  ರ್ಯಾಂಕ್ ಪಟ್ಟಿಯ ಫಲಿತಾಂಶವನ್ನು ಕರ್ನಾಟಕ ಪ್ರಾಧಿಕಾರ ಅ.1 ಕ್ಕೆ ಮುಂದೂಡಿದೆ.

ಸೆ. 29 ರಂದು ಪಟ್ಟಿ ಪ್ರಕಟವಾಗಲಿದೆ ಎಂದು ಕರ್ನಾಟಕ ಪ್ರಾಧಿಕಾರ ಪ್ರಕಟಣೆ ಹೊರಡಿಸಿತಾದರೂ ತಾಂತ್ರಿಕ ಕೆಲಸಗಳು ನಡೆಯಬೇಕಿರುವ ಹಿನ್ನೆಲೆ ಕಾರಣಾಂತರಗಳಿಂದ ಸಿಇಟಿ 2022 ಪರಿಷ್ಕ್ರತ ರ್ಯಾಂಕ್ ಪಟ್ಟಿಯ ಫಲಿತಾಂಶವನ್ನು ಕರ್ನಾಟಕ ಪ್ರಾಧಿಕಾರ ಅ.1 ಕ್ಕೆ ಮುಂದೂಡಿದೆ. ಪರಿಷ್ಕ್ರತ ರ್ಯಾಂಕ್ ಪಟ್ಟಿ ಎಂಜಿನಿಯರಿಂಗ್ ಕೋರ್ಸ್ ಗಳಿಗೆ ಮಾತ್ರ ಅನ್ವಯವಾಗಲಿದೆ. ಬೇರೆ ಯಾವುದೇ ಬಿ.ಎಸ್ಸಿ, ಕೃಷಿ, ಪಶುಸಂಗೋಪನೆ, ಯೋಗ ಕೋರ್ಸ್ ಗಳಿಗೆ ಅನ್ವಯವಾಗುವುದಿಲ್ಲ ಎನ್ನಲಾಗಿದೆ.

ಪರಿಷ್ಕ್ರತ ರ್ಯಾಂಕ್ ಪಟ್ಟಿಗಾಗಿ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಕಾಯುತ್ತಿದ್ದು, ಸೆ. 29 ರಂದು ಪಟ್ಟಿ ಪ್ರಕಟವಾಗಲಿದೆ ಎಂದು ಈ ಮೊದಲು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದರು.

BIG NEWS: ‘ಲಲಿತ ಪಂಚಮಿ’ಯಂದು ಮುಜರಾಯಿ ದೇವಸ್ಥಾನಗಳಲ್ಲಿ ಸಾಮೂಹಿಕ “ಕುಂಕುಮಾರ್ಚನೆ”ಗೆ ರಾಜ್ಯ ಸರ್ಕಾರದಿಂದ ಆದೇಶ

BIGG NEWS :’ಬಿಬಿಎಂಪಿ’ ಚುನಾವಣೆಗೆ ಅಂತಿಮ ಮತದಾರರ ಪಟ್ಟಿ ಪ್ರಕಟ ; 79 ಲಕ್ಷ ಮತದಾರರು |BBMP Election 2022

Share.
Exit mobile version