ಬೆಂಗಳೂರು: ರಾಜ್ಯ ಬಿಜೆಪಿ ನೇತೃತ್ವದ ( BJP Government ) ಸರ್ಕಾರದಲ್ಲಿ ಈಗ ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆ ಗರಿ ಗೆದರಿದೆ. ಅನೇಕ ಶಾಸಕರು ತಮಗೂ ಸಚಿವ ಸ್ಥಾನ ನೀಡಬೇಕು ಎನ್ನುವಂತ ಆಕಾಂಕ್ಷೆಯನ್ನು ವ್ಯಕ್ತ ಪಡಿಸಿದ್ದಾರೆ. ಇದರ ನಡುವೆ ಸಿಎಂ ಬಸವರಾಜ ಬೊಮ್ಮಾಯಿಯವರು, ಬಿಜೆಪಿ ಹೈಕಮಾಂಡ್ ( BJP High Command ) ಸಂಪುಟ ವಿಸ್ತರಣೆ ( Cabinet Expansion ) ಬಗ್ಗೆ ಸೂಚಿಸಿದ್ರೇ.. ಎಲ್ಲಾ ಮಾಹಿತಿ ನೀಡೋದಾಗಿ ತಿಳಿಸಿದ್ದಾರೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ಆಗೋದು ಬಹುತೇಕ ಫಿಕ್ಸ್ ಎನ್ನಲಾಗಿದೆ. ಒಂದು ವೇಳೆ ಸಂಪುಟ ವಿಸ್ತರಣೆ ಆದ್ರೇ ಖಾಲಿ ಇರುವಂತ 4 ಸ್ಥಾನಗಳಿಗೆ ಯಾರು ಇನ್.? ಯಾರು ಔಟ್ ಎನ್ನುವ ಬಗ್ಗೆ ಮುಂದೆ ಓದಿ..
‘ಮಗನ ಸಾವಿನ ಸುದ್ದಿ’ ಕೇಳಿ ತಾಯಿಯೂ ನಿಧನ: ಸಾವಿನಲ್ಲೂ ಒಂದಾದ ‘ತಾಯಿ-ಮಗ’
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದಂತ ಸಚಿವ ಕೆ.ಎಸ್.ಈಶ್ವರಪ್ಪ, ನಾಲ್ಕು ಸ್ಥಾನ ಉಳಿದಿದೆ. ಆ ಸ್ಥಾನಗಳನ್ನು ಅಭಿವೃದ್ಧಿ ಕಾರ್ಯಗಳ ದೃಷ್ಠಿಯಿಂದ ಹಂಚಿಕೆ ಮಾಡೋ ಅಗತ್ಯವಿದೆ. ಕೆಲ ಮತ ಪಡೆಯಲು ಸಮುದಾಯಗಳ ಶಾಸಕರಿಗೆ ಸಚಿವ ಸ್ಥಾನ ನೀಡುವಂತ ತುರ್ತು ಕಂಡು ಬಂದಿದೆ. ಆ ನಿಟ್ಟಿನಲ್ಲಿ ಗಮನಿಸಿ ಸಚಿವ ಸಂಪುಟ ವಿಸ್ತರಣೆ ಮಾಡಬೇಕಿದೆ ಎಂದರು.
BREAKING NEWS: ಶವವಾಗಿ ಪತ್ತೆಯಾದ ಸಾಗರದ ‘ಪ್ರಕಾಶ್ ಟ್ರಾವೆಲ್ಸ್’ ಮಾಲೀಕ
ಕೇಂದ್ರ ನಾಯಕರ ನಿರ್ಧಾರಕ್ಕೆ ನಾವೆಲ್ಲಾ ಬದ್ಧವಾಗಿದ್ದೇವೆ. ಬಿಜೆಪಿಯಲ್ಲಿ ಯಾವುದೇ ಒಡಕಿಲ್ಲ. ನನ್ನ ಸ್ಥಾನ ತೆಗೆದು, ಪಕ್ಷದ ಜವಾಬ್ದಾರಿಯನ್ನು ಕೊಟ್ರು ಸಂತೋಷದಿಂದ ಮಾಡುತ್ತೇನೆ. ಪಕ್ಷದಲ್ಲಿ ಸದ್ಯ ನಾನೇ ಹಿರಿಯ ಸಚಿವ ಎಂದು ಹೇಳಿದ್ದಾರೆ.
ವ್ಯಕ್ತಿ ಶವವನ್ನು ಸುತ್ತುವರಿದ 124 ಹಾವುಗಳು… ಆತನ ಸಾವಿಗೆ ಪುರಾವೆಗಳು ಸಿಗದೇ ಪೊಲೀಸರೇ ಕಂಗಾಲು!
ಇತ್ತ ಹೊನ್ನಾಳ್ಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ನಮಗೇನು ಸಚಿವ ಸ್ಥಾನದ ಅರ್ಹತೆ ಇಲ್ಲವಾ.? ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರೋದಕ್ಕೆ ನಾನು ಹಾಗೂ ಯತ್ನಾಳ್ ಮೈತ್ರಿ ಸರ್ಕಾರ ಪತನವಾಗಲು ಎಷ್ಟೆಲ್ಲಾ ಪ್ರಯತ್ನಾ ನಡೆಸಿಲ್ಲ. ಕೆಲ ಸಚಿವರು ಪೋನ್ ರಿಸೀವ್ ಮಾಡಲ್ಲ. ಪತ್ರ ಕೊಟ್ಟರೇ ಉತ್ತರವೂ ನೀಡೋದಿಲ್ಲ. ಈ ಸಚಿವರು ಬೇಕಾ.? ಎಂದು ಪ್ರಶ್ನಿಸಿದರು.
ಇದರ ನಡುವೆ ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರದ ಸಂಪುಟ ವಿಸ್ತರಣೆ ಆದ್ರೇ.. ಕೆಲವರು ಹಾಲಿ ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತಿದೆ ಎನ್ನಲಾಗುತ್ತಿದೆ. ಇವರ ಸ್ಥಾನಕ್ಕೆ ನಾಲ್ವರು ಶಾಸಕರನ್ನು ನೂತನ ಸಚಿವರಾಗಿ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅವರಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಕೈಬಿಟ್ಟು, ಶಾಸಕ ಎಂ.ಪಿ.ರೇಣುಕಾಚಾರ್ಯ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
BIGG NEWS: ನನಗೇನು ಸಚಿವನಾಗು ಅರ್ಹತೆ ಇಲ್ಲವಾ.? : ಸಚಿವಸ್ಥಾನಕ್ಕಾಗಿ ಸಿಡಿದೆದ್ದ ಬಿಜೆಪಿ ಶಾಸಕ
ಇನ್ನೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. ಅಲ್ಲದೇ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೂ ಸಚಿವ ಸ್ಥಾನ ನೀಡಲಾಗುತ್ತಿದೆ ಎನ್ನಲಾಗುತ್ತಿದೆ. ಪಶು ಸಂಗೋಪನ ಸಚಿವ ಪ್ರಭು ಚೌವ್ಹಾನ್ ಅವರನ್ನು ಕೈಬಿಟ್ಟು, ಕುಡುಚಿ ಶಾಸಕ ಪಿ.ರಾಜೀವ್ ಅವರಿಗೆ, ಮೈಸೂರಿನ ಎಸ್ ಎ ರಾಮದಾಸ್, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಬಸವನಗೌಡ ಪಾಟೀಲ್ ಯತ್ನಾಳ್ ಗೂ ಸಚಿವ ಸ್ಥಾನ ನೀಡೋ ನಿರೀಕ್ಷೆ ಇದೆ. ಆ ಬಗ್ಗೆ ಕಾದು ನೋಡಬೇಕಿದೆ.