ಬೆಂಗಳೂರು: ಎಂಇಎಸ್ ಪುಂಡಾಟಿಕೆ ಖಂಡಿಸಿ ನಾಳೆ ಕನ್ನಡಪರ ಸಂಘಟನೆಗಳಿಂದ ಕರ್ನಾಟಕ ಬಂದ್ ಗೆ ( Karnataka Bundh ) ಕರೆ ನೀಡಲಾಗಿದೆ. ಈ ಬಂದ್ ಸಂದರ್ಭದಲ್ಲಿ ಯಾವುದೇ ಪ್ರತಿಭಟನಾ ಮೆರವಣಿಗೆಯನ್ನು ನಗರದಲ್ಲಿ ನಡೆಸುವಂತಿಲ್ಲ. ಯಾವುದೇ ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡಿಸುವಂತಿಲ್ಲ. ಒಂದು ವೇಳೆ ಹೀಗೆ ಮಾಡಿದ್ರೇ.. ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ( DCP Anucheth ) ಖಡಕ್ ವಾರ್ನಿಂಗ್ ನೀಡಿದ್ದಾರೆ.
ಈ ಕುರಿತಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾಳೆ ಹೊಸ ವರ್ಷಾಚರಣೆಗೂ ( New Year ) ಅವಕಾಶ ವಿಲ್ಲ. ಬಹಿರಂಗವಾಗಿ ಯಾರೂ ಹೊಸ ವರ್ಷಾಚರಣೆ ಮಾಡುವಂತಿಲ್ಲ. ಡಿಜೆಗೂ ಅನುಮತಿ ಇಲ್ಲ. ರಾತ್ರಿ 10ರಿಂದ ಎಂದಿನಂತೆ ನೈಟ್ ಕರ್ಪ್ಯೂ ಜಾರಿಯಲ್ಲಿ ಇರಲಿದೆ. ನೈಟ್ ಕರ್ಪ್ಯೂ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದ್ರೇ.. ಕಾನೂನು ಕ್ರಮ ಕೈಗೊಳ್ಳೋದಾಗಿ ತಿಳಿಸಿದರು.
BIGG NEWS: ಫೆ.28ರವರೆಗೆ KSRTCಯಿಂದ ಪತ್ರಕರ್ತರಿಗೆ ನೀಡಿರುವ ‘ಬಸ್ ಪಾಸ್’ ಅವಧಿ ವಿಸ್ತರಣೆ
ಇನ್ನೂ ನಾಳೆ ಕನ್ನಡಪರ ಸಂಘಟನೆಗಳು ಕರೆ ನೀಡಿರುವಂತ ಕರ್ನಾಟಕ ಬಂದ್ ಸಂದರ್ಭದಲ್ಲಿ ಯಾವುದೇ ಪ್ರತಿಭಟನಾ Rallyಗೆ ಅವಕಾಶ ಇಲ್ಲ. ಕರ್ನಾಟಕ ಬಂದ್ ಹೆಸರಿನಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿದ್ರೇ.. ಬಂಧಿಸಲಾಗುತ್ತದೆ. ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ರೇ ಅಂತವರ ವಿರುದ್ಧ ಕಾನೂನ ಕ್ರಮ ಕೈಗೊಳ್ಳಲಾಗೋದಾಗಿ ಎಚ್ಚರಿಕೆ ನೀಡಿದ್ದಾರೆ.