ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ( Karnataka Assembly Election 2023 ) ವೇಳೆಯಲ್ಲಿ ಅಕ್ರಮ ತಡೆಗೆ ಚುನಾವಣಾ ಆಯೋಗವು ಹದ್ದಿನ ಕಣ್ಣು ನೆಟ್ಟಿದೆ. ಈವರೆಗೆ 39.38 ಕೋಟಿಯನ್ನು ಸೀಜ್ ಮಾಡಲಾಗಿದ್ದು, ಸಾರ್ವಜನಿಕರಿಂದ 958 ದೂರು ಸ್ವೀಕರಿಸಲಾಗಿದೆ.
ಈ ಬಗ್ಗೆ ಕರ್ನಾಟಕ ಚುನಾವಣಾ ಆಯೋಗದಿಂದ ( Election Commission of Karnataka ) ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆಯನ್ನು ಮಾಡಲಾಗಿದೆ. ನೀತಿ ಸಂಹಿತೆ ಘೋಷಣೆಯ ಬಳಿಕ 2,040 ಪ್ಲೈಯಿಂಗ್ ಸ್ಕಾಡ್ ಹಾಗೂ 2,605 ಸರ್ವೀವಲೆನ್ಸ್ ಟೀಮ್ ಕಾರ್ಯನಿರ್ವಹಿಸುತ್ತಿದೆ. 29,828 ಗೋಡೆ ಬರಹ, 37,955 ಪೋಸ್ಟರ್, 14,413 ಬ್ಯಾನರ್ ಮತ್ತು 16,290 ಇತರೆ ಖಾಸಗಿ ಆಸ್ತಿಗಳ ಮೇಲಿನ ಜನಪ್ರತಿನಿಧಿಗಳ ಮಾಹಿತಿ ತೆಗೆದು ಹಾಕಲಾಗಿದೆ. ನೀತಿ ಸಂಹಿತೆ ಮೀರಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲ್ಪ ಕಾರಣ 73 ಪ್ರಕರಣ ಸೇರಿದಂತೆ ಈವರೆಗೆ 1,981 ಕೇಸ್ ಚುನಾವಣೆ ಘೋಷಣೆಯ ನಂತ್ರ ದಾಖಲಿಸಲಾಗಿದೆ ಎಂದು ತಿಳಿಸಿದೆ.
ಸ್ಥಿರ ಕಣ್ಗಾವಲು ಪಡೆ, ಪ್ಲೈಯಿಂಗ್ ಸ್ಕ್ವಾಡ್, ಎಸ್ಎಸ್ ಟಿ ಹಾಗೂ ಪೊಲೀಸ್ ಇಲಾಖೆಯ ಚುನಾವಣಾ ಕರ್ತವ್ಯ ನಿರತ ಅಧಿಕಾರಿಗಳಿಂದ 7,07,79,207 ಹಣ ಸೀಜ್ ಮಾಡಲಾಗಿದೆ. 1,156.11 ಲೀಟರ್ ನ ಸುಮಾರು 5,80,007 ಮೌಲ್ಯದ್ದು ವಶಪಡಿಸಿಕೊಳ್ಳಲಾಗಿದೆ. 39.25 ಕೆಜಿಯ 21,76,950 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. ರೂ.9,58,68,772 ಮೌಲ್ಯದ ಬಟ್ಟೆ ಸೇರಿದಂತೆ 172 ಎಫ್ಐಆರ್ ದಾಖಲಿಸಲಾಗಿದೆ. ಆದಾಯ ತೆರಿಗೆ ಇಲಾಖೆಯಿಂದ 3,90,00,000 ರಷ್ಟು ವಶಪಡಿಸಿಕೊಂಡಿದೆ. ಒಟ್ಟಾರೆ ಹಣ, ವಸ್ತು, ಮಧ್ಯ, ಮಾಧಕ ವಸ್ತು ಸೇರಿದಂತೆ ಒಟ್ಟು ರೂ.93,38,44,847 ದಷ್ಟು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದೆ.
ಎಸ್ ಎಸ್ ಟಿ ತಂಡದಿಂದ ರೂ.1,93,00,00 ಹಣವನ್ನು ಶಿವಮೊಗ್ಗ ಜಿಲ್ಲೆಯಲ್ಲಿ ಸೀಜ್ ಮಾಡಿದೆ. ಬೆಂಗಳೂರಿನ ಚಿಕ್ಕಪೇಟೆಯಲ್ಲಿ 30 ಲಕ್ಷ, ಕಲಬುರ್ಗಿ ನಗರದಲ್ಲಿ 1 ಕೋಟಿಯನ್ನು ದಿನಾಂಕ 31-03-2023ರವರೆಗೆ ಜಪ್ತಿ ಮಾಡಲಾಗಿದೆ ಎಂದು ಹೇಳಿದೆ.
ಸಾರ್ವಜನಿಕರಿಂದ ಬಂದಂತ 918 ದೂರುಗಳನ್ನು ಹೆಲ್ಪ್ ಲೈನ್ ಮೂಲಕ ಸ್ವೀಕರಿಸಲಾಗಿದೆ. 893 ಮಂದಿ ಅಕ್ರಮದ ಬಗ್ಗೆ ಮಾಹಿತಿ ನೀಡಿದ್ದರೇ, 3 ಫೀಡ್ ಬ್ಯಾಕ್ ಕಾಲ್ ಗಳಾಗಿದ್ದಾವೆ. 6 ಮಂದಿ ಸಲಹೆ ನೀಡಿದ್ದಾರೆ. 16 ಕಂಪ್ಲೇಂಡ್ ದಾಖಲಿಸಲಾಗಿದೆ. ಬಂದ 918 ಕರೆಗಳನ್ನು ಪರಿಶೀಲಿಸಿ ಕ್ರಮವಹಿಸಲಾಗಿದೆ. ಎನ್ ಜಿ ಆರ್ ಎಸ್ ಮೂಲಕ 958 ದೂರುಗಳು ಬಂದಿವೆ. 572 ದೂರು ಬಗೆ ಹರಿಸಲಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಮಾಹಿತಿ ನೀಡಿದೆ.
cVIGIL ಆಪ್ ಮೂಲಕ 266 ದೂರುಗಳು ದಾಖಲಾಗಿದ್ದಾವೆ. ಹೀಗೆ ದಾಖಲಿಸಲಾದಂತ ದೂರುಗಳಲ್ಲಿ ಬಹುತೇಕ ಅನುಮತಿ ಪಡೆಯದೇ ಹಾಕಿದಂತ ಪೋಸ್ಟರ್, ಬ್ಯಾನರ್ ಗ 97 ದೂರು. ಹಣ ಹಂಚಿಕೆ ಬಗ್ಗೆ 8, ಪೇಯ್ಡ್ ನ್ಯೂಸ್ ಬಗ್ಗೆ 03, ಗಿಫ್ಟ್ ಹಂಚಿಕೆ, ಕೂಪನ್ ಹಂಚಿಕೆ ಬಗ್ಗೆ 08, ಮಧ್ಯ ಹಂಚಿಕೆ ಬಗ್ಗೆ 05, ಆಸ್ತಿ ಹಂಚಿಕೆ 05, ಅನುಮತಿ ಪಡೆಯದೇ ವಾಹನ ಬಳಕೆ 08 ದೂರು ಬಂದಿವೆ. 238 ದೂರುಗಳ ಬಗ್ಗೆ ಕ್ರಮ ವಹಿಸಲಾಗಿದೆ ಎಂದಿದೆ.
ಮಾಧ್ಯಮಗಳಿಗೆ ಸಂಬಂಧಿಸಿದಂತೆ ಇ-ಮೇಲ್ ಹಾಗೂ ಪತ್ರಗಳ ಮೂಲಕ 38 ದೂರುಗಳು ಬಂದಿವೆ. ನ್ಯೂಸ್ ಪೇಪರ್ ಗೆ ಸಂಬಂಧಪಟ್ಟಂತೆ 04, ಟಿವಿ ಚಾನಲ್ 12, ಸೋಷಿಯಲ್ ಮೀಡಿಯಾ 19 ಸೇದಿದಂತೆ 73 ದೂರುಗಳು ಬಂದಿವೆ. 62 ದೂರುಗಳನ್ನು ಪರಿಶೀಲಿಸಿ ಕ್ರಮವಹಿಸಲಾಗಿದೆ ಎಂದು ಹೇಳಿದೆ.
ಸುವಿಧದ ಮೂಲಕ 321 ಅರ್ಜಿಗಳು ಬಂದಿದ್ದಾವೆ. 120 ಅರ್ಜಿಗಳಿಗೆ ಒಪ್ಪಿಗೆ ನೀಡಲಾಗಿದೆ. 97 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 89 ಅರ್ಜಿಗಳ ಬಗ್ಗೆ ಪ್ರೊಸೆಸಿಂಗ್ ಹಂತದಲ್ಲಿವೆ. 15 ಅರ್ಜಿಗಳನ್ನು ಸಮಯಕ್ಕೆ ಸರಿಯಾಗಿ ಕ್ರಮ ವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದೆ.
ವರದಿ: ವಸಂತ ಬಿ ಈಶ್ವರಗೆರೆ
BIGG NEWS : “ಹೊಸ ಬೆದರಿಕೆಗಳನ್ನ ಎದುರಿಸಲು ಸಿದ್ಧರಾಗಿರಿ” ; ಕಮಾಂಡರ್’ಗಳ ಸಮ್ಮೇಳನದಲ್ಲಿ ಪ್ರಧಾನಿ ಮೋದಿ
BIG NEWS: ಹೆಂಡತಿ ಕಾಟ ತಾಳಲಾರದೇ 26 ಲಕ್ಷ ಹಣದೊಂದಿಗೆ ಗೋವಾಕ್ಕೆ ಹೊರಟ ಗುತ್ತಿಗೆದಾರ: ಮುಂದೆ ಆಗಿದ್ದೇನು ಗೊತ್ತ?