ದೆಹಲಿ: ಇಂದು ದೇಶದಲ್ಲಿ ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas) ಆಚರಿಸಲಾಗುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 1999 ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು ಮತ್ತು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿದರು.

ಕಾರ್ಗಿಲ್ ಯುದ್ಧದ ಸಮಯದಲ್ಲಿ ಕರ್ತವ್ಯದ ವೇಳೆ ತಮ್ಮ ಪ್ರಾಣವನ್ನು ಅರ್ಪಿಸಿದ ಸೈನಿಕರ ತ್ಯಾಗವನ್ನು ಗೌರವಿಸಲು ಜುಲೈ 26 ಅನ್ನು ಕಾರ್ಗಿಲ್ ವಿಜಯ್ ದಿವಸ್ ಎಂದು ಗುರುತಿಸಲಾಗುತ್ತದೆ.

ಅಷ್ಟೇ ಅಲ್ಲದೇ, ಮೂರು ಸೇನಾ ಮುಖ್ಯಸ್ಥರಾದ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

ಇದಕ್ಕೂ ಮೊದಲು, ಜುಲೈ 24 ರಂದು, ಕಾರ್ಗಿಲ್ ಯುದ್ಧ ವೀರರಿಗೆ ಗೌರವ ಸಲ್ಲಿಸಲು ದ್ರಾಸ್ ಪಟ್ಟಣದಲ್ಲಿ “ಏಕ್ ಶಾಮ್ ಶಾಹಿದೋನ್ ಕೆ ನಾಮ್” ಎಂಬ ಸಂಗೀತ ಪ್ರದರ್ಶನದಲ್ಲಿ ಹಲವಾರು ಬ್ಯಾಂಡ್‌ಗಳು ಪ್ರದರ್ಶನ ನೀಡಿದವು.

ಭಾರತೀಯ ಸಶಸ್ತ್ರ ಪಡೆಗಳು ಜುಲೈ 26, 1999 ರಂದು ಪಾಕಿಸ್ತಾನವನ್ನು ಸದೆಬಡಿದು ವಿಜಯ ಪತಾಕೆ ಹಾರಿಸಿತ್ತು. ಈ ವೇಳೆ ಹಲವಾರು ಸೈನಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಅವರ ನೆನಪಿಗಾಗಿ ಈ ದಿನವನ್ನು ‘ಕಾರ್ಗಿಲ್ ವಿಜಯ್ ದಿವಸ್’ ಎಂದು ಆಚರಿಸಲಾಗುತ್ತದೆ.

BIGG NEWS: ಪತಿ-ಪತ್ನಿ ನಡುವೆ ಶುರುವಾದ ಜಗಳ ಪತಿಯ ಸಾವಿನಲ್ಲಿ ಅಂತ್ಯ; ನಿಂತಿದ್ದ ವಾಹನಕ್ಕೆ ನೇಣು ಬಿಗಿದುಕೊಂಡು ಸೂಸೈಡ್‌

Big news:‌ ಇಂದಿನಿಂದ 5ಜಿ ತರಂಗಾಂತರ ಹರಾಜು ಪ್ರಕ್ರಿಯೆ ಆರಂಭ: ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಸೇರಿ 4 ಕಂಪನಿಗಳ ನಡುವೆ ಭಾರೀ ಪೈಪೋಟಿ

Big news: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್​ಗೆ ಎರಡನೇ ಬಾರಿ ಕೋವಿಡ್ ದೃಢ| CM Nitish Kumar tests Covid positive

Share.
Exit mobile version