ಸುಭಾಷಿತ :

Wednesday, January 22 , 2020 12:11 PM

ಮಹಾ ಗೆಲುವಿನತ್ತ ಮುನ್ನಡೆಯುತ್ತಿದ್ದಾನೆ ಕಪಟ ನಾಟಕ ಪಾತ್ರಧಾರಿ!


Tuesday, November 12th, 2019 7:11 am

ಸಿನಿಮಾಡೆಸ್ಕ್: ನಿರೀಕ್ಷೆ ನಿಜವಾಗಿದೆ. ಕಪಟ ನಾಟಕ ಪಾತ್ರಧಾರಿ ಎಂಬ ಹೊಸಬರ ಚಿತ್ರವೊಂದು ಆರಂಭಿಕವಾಗಿಯೇ ಸದ್ದು ಮಾಡಿದ ಪರಿ ಕಂಡು ಇದು ಮಹತ್ವದ್ದೊಂದು ಗೆಲುವು ದಾಖಲಿಸಲಿದೆ ಅಂತ ಎಲ್ಲರಿಗೂ ಅನ್ನಿಸಿತ್ತು. ಹಾಡುಗಳು ಮತ್ತು ಟ್ರೇಲರ್ ಮೂಲಕ ಆ ನಂಬಿಕೆ ಮತ್ತಷ್ಟು ನಿಚ್ಚಳವಾಗಿತ್ತು. ಇದೀಗ ಈ ಚಿತ್ರ ತೆರೆಗಂಡು ವಾರ ಕಳೆಯುತ್ತಲೇ ಅದೆಲ್ಲವೂ ನಿಜವಾಗಿದೆ. ಕರ್ನಾಟಕದ ಎಲ್ಲ ಕಡೆಗಳಲ್ಲಿಯೂ ಈ ಸಿನಿಮಾವೀಗ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಒಂದೊಳ್ಳೆ ಕಥೆ, ಚುರುಕುತನದಿಂದ ಕೂಡಿದ ನಿರೂಪಣೆ, ಅದಕ್ಕೆ ಪೂರಕವಾದ ನಟನೆ ಮತ್ತು ಭರ್ಜರಿ ಮನೋರಂಜನೆಯೊಂದಿಗೆ ಕಪಟ ನಾಟಕ ಪಾತ್ರಧಾರಿ ಮಹಾ ಗೆಲುವಿನೊಂದಿಗೆ ಮುನ್ನಡೆಯುತ್ತಿದ್ದಾನೆ.

ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಚಿತ್ರದ ಕಥೆಯ ಹೊಳಹು ಟ್ರೇಲರ್ ಮೂಲಕವೇ ಸಿಕ್ಕಿತ್ತು. ಆದರೆ ಅಲ್ಲಿಯೂ ಕೂಡಾ ನಿಖರವಾಗಿ ಕಥೆ ಏನಿರಬಹುದೆಂದು ಪ್ರತಿಯೊಬ್ಬರೂ ತಲೆ ಕೆಡಿಸಿಕೊಳ್ಳುವಂತೆ ಮಾಡುವಲ್ಲಿ ಚಿತ್ರತಂಡ ಯಶಸ್ವಿಯಾಗಿತ್ತು. ಪ್ರತೀ ಹಂತದಲ್ಲಿಯೂ ಹೀಗೆ ಕುತೂಹಲ ಕಾಯ್ದಿಟ್ಟುಕೊಳ್ಳುವ ತಂತ್ರಗಾರಿಕೆ ಪ್ರದರ್ಶಿಸುತ್ತಿದ್ದ ಚಿತ್ರತಂಡವೀಗ ಗಟ್ಟಿ ಕಥೆಯೊಂದನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸಿದೆ. ಒಂದರೆ ಕ್ಷಣವೂ ನೋಡುಗರನ್ನು ಆಚೀಚೆ ಕದಲದಂತೆ ಕಟ್ಟಿಡುವ ದೃಷ್ಯಗಳಿಂದಲೇ ಭರಪೂರ ಗೆಲುವು ಕಪಟ ನಾಟಕ ಪಾತ್ರಧರಿಗೆ ಸಾಧ್ಯವಾಗಿದೆ.

ಇಡೀ ಚಿತ್ರದಲ್ಲಿ ಎಲ್ಲವೂ ಒಂದಕ್ಕೊಂದು ಪೂರಕವಾಗಿದೆ. ಬಾಲು ನಾಗೇಂದ್ರ ನಟನೆಯಂತೂ ಎಲ್ಲರ ಗಮನ ಸೆಳೆದಿದೆ. ಈ ಹಿಂದೆ ಹುಲಿರಾಯ ಎಂಬ ಚಿತ್ರದ ಮೂಲಕ ನಾಯಕನಾಗಿ ಅಬ್ಬರಿಸಿದ್ದವರು ಬಾಲು ನಾಗೇಂದ್ರ. ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆಂಬುದೇ ಭಿನ್ನವಾದ ಕಥೆಯ ನಿರೀಕ್ಷೆಗೆ ಕಾರಣವಾಗಿತ್ತು. ಇಲ್ಲಿ ಅದಕ್ಕೆ ತಕ್ಕುದಾದ ಕಥೆಯಿದೆ. ಅದು ಹೆಜ್ಜೆ ಹೆಜ್ಜೆಗೂ ನಿಮ್ಮನ್ನೆಲ್ಲ ಸಂತುಷ್ಟರನ್ನಾಗಿಸುತ್ತದೆ. ಇದನ್ನು ಮಿಸ್ ಮಾಡಿಕೊಂಡರೆ ಒಂದು ಅಪರೂಪದ ಸಿನಿಮಾ ನೋಡುವ ಸುವರ್ಣಾವಕಾಶವನ್ನು ತಪ್ಪಿಸಿಕೊಂಡಂತೆಯೇ. ನಿಮ್ಮ ಹತ್ತಿರದ ಚಿತ್ರಮಂದಿರಗಳನ್ನು ಬೇಗನೆ ಕಣ್ತುಂಬಿಕೊಳ್ಳಿ

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions