ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಕಾಂತಾರ ಸಿನಿಮಾ ಹಲವು ವಿವಾದಗಳಿಗೆ ಗುರಿಯಾದ ಬೆನ್ನಲ್ಲೇ ಕಾಂತಾರ ಸಿನಿಮಾದ ಫೇಮಸ್ ಡೈಲಾಗ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಕಾಂತಾರ ಸಿನಿಮಾದ ‘ನೀನು ಕೋರ್ಟಿಗೆ ಹೋಗ್ತಿ, ನಿನ್ನ ತೀರ್ಮಾನ ನಾ ಮೆಟ್ಟಿಲಲ್ಲಿ ನಾ ಮಾಡುವೆ’ ಎಂಬ ದೈವದ ಮಾತು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹರಿದು ಬಿಡುತ್ತಿದ್ದಾರೆ. ಕಾಂತಾರ ಸಿನಿಮಾ ವಿವಾದ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ನೆಟ್ಟಿಗರು ಪೋಸ್ಟ್ ಹರಿದು ಬಿಡುತ್ತಿದ್ದಾರೆ.

ಇನ್ನೂ, ಸ್ಯಾಂಡಲ್ ವುಡ್ ನಲ್ಲಿ ( Sandalwood ) ಹೊಸ ಅಲೆಯನ್ನು ಸೃಷ್ಠಿಸಿ, ಕೆಜಿಎಫ್-2 ( KGF-2 ) ದಾಖಲೆಯನ್ನು ಉಡೀಸ್ ಮಾಡಿದ್ದಂತ ಕಾಂತಾರ ಚಿತ್ರದಲ್ಲಿನ ( Kantara Movie ) ವರಾಹ ರೂಪಂ ಹಾಡಿಗೆ ಕೇರಳ ಕೋರ್ಟ್ ( Kerala Court ) ತಡೆ ನೀಡಿತ್ತು. ಇದೀಗ ಮತ್ತೆ ವರಾಹ ರೂಪಂ ಹಾಡನ್ನು ( Varaha Rupam Song ) ಚಿತ್ರದಲ್ಲಿ ಬಳಕೆ ಮಾಡುವುದಕ್ಕೆ ಕೋಜಿಕ್ಕೋಡ್ ಕೋರ್ಟ್ ಆದೇಶಿಸಿದೆ.ಕೇರಳದ ತೆಕ್ಕುಡಂ ಬ್ರಿಡ್ಜ್ ಬ್ಯಾಂಡ್ ನ ನವರಸಂ ಹಾಡಿನ ಟ್ಯೂನ್ ಅನ್ನು ಕನ್ನಡದ ಕಾಂತಾರ ಚಿತ್ರದಲ್ಲಿನ ವರಾಹ ರೂಪಂ ನಲ್ಲಿ ಬಳಕೆ ಮಾಡಲಾಗಿದೆ ಎಂಬುದಾಗಿ ತೈಕ್ಕುಡಂ ಬ್ರಿಡ್ಜ್ ಕೇರಳದ ಕೋಝಿಕ್ಕೋಡ್ ಪ್ರಧಾನ ಜಿಲ್ಲಾ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದಂತ ನ್ಯಾಯಪೀಠವು ಒಪ್ಪಿಗೆ ಇಲ್ಲದೇ ಟ್ಯೂನ್ ಬಳಕೆ ಮಾಡಿದ್ದಕ್ಕೆ ತಡೆಯಾಜ್ಞೆ ಹೊರಡಿಸಿತ್ತು.

ಆದ್ರೇ ಹೊಂಬಾಳೆ ಫಿಲ್ಮ್ ನಿಂದ ಕೇರಳದ ಪಾಲಕ್ಕಾಡ್ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ, ಪ್ರೇಕ್ಷಕರು ನೀಡಿದಂತ ಅಭಿಪ್ರಾಯವನ್ನು ಪರಿಗಣಿಸಬಾರದು. ನಾವು ತೆಕ್ಕುಡಂ ಬ್ರಿಡ್ಜ್ ಅವರ ಟ್ಯೂನ್ ಕದ್ದು ಬಳಕೆ ಮಾಡಿಲ್ಲ ಎಂಬುದಾಗಿ ಹೇಳಿತ್ತು. ಈ ಮನವಿ ಪುರಸ್ಕರಿಸಿದಂತ ಕೋರ್ಟ್, ಇದೀಗ ಹೊಸ ಆದೇಶದಲ್ಲಿ ಕಾಂತಾರ ಚಿತ್ರದ ವರಾಹ ರೂಪಂ ಹಾಡಿಗೆ ನೀಡಿದ್ದಂತ ತಡೆಯಾಜ್ಞೆಯನ್ನು ತೆರವುಗೊಳಿಸಿದೆ. ಈ ಮೂಲಕ ಕಾಂತಾರ ಚಿತ್ರ ತಂಡಕ್ಕಿ ಬಿಗ್ ರಿಲೀಫ್ ನೀಡಿದೆ.

BIG BREAKING NEWS: ‘ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ’ಯ ‘ಅಂತಿಮ ಕೀ ಉತ್ತರ’ ಪ್ರಕಟ | KARTET-2022

ಸಿಇಟಿ ಅರ್ಜಿ ತುಂಬುವಲ್ಲಿನ ಲೋಪ: ಪದವಿಪೂರ್ವ ಕಾಲೇಜುಗಳಲ್ಲಿ ಸಹಾಯ ಕೇಂದ್ರ ಸ್ಥಾಪನೆ – ಸಚಿವ ಅಶ್ವತ್ಥನಾರಾಯಣ

Share.
Exit mobile version