ಸುಭಾಷಿತ :

Wednesday, January 29 , 2020 9:37 PM

ಅಪರೂಪದ ಕಥೆಯೊಂದಿಗೆ ಆಪ್ತವಾಗುವ ‘ಅಳಿದು ಉಳಿದವರು’! 3.5 / 5


Saturday, December 7th, 2019 10:35 pm

ಸಿನಿಮಾ ಡೆಸ್ಕ್ :  ನಂಬಿಕೆ ಮತ್ತು ಮೂಢ ನಂಬಿಕೆಯ ನಡುವಿನ ವಾಸ್ತವವನ್ನು ಪತ್ತೆಹಚ್ಚುವ ಪ್ರಯತ್ನದ ಕಥೆಗಳು ಕನ್ನಡದಲ್ಲಿ ಅಪರೂಪ. ಒಂದು ಗುಮಾನಿಯಿಟ್ಟುಕೊಂಡೇ ದೆವ್ವವನ್ನು ಸರಕಾಗಿಸಿಕೊಂಡ ಕಥೆಗಳೇ ಆಗಾಗ ಹುಟ್ಟಿಕೊಳ್ಳುತ್ತವೆ. ಈ ವಾತಾವರಣದಲ್ಲಿ ಹೊಸಾ ಬಗೆಯ ಕಥೆಯೊಂದನ್ನು ಒಡಲಲ್ಲಿಟ್ಟುಕೊಂಡಿರೋ ಅಳಿದು ಉಳಿದವರು ಚಿತ್ರ ಇದೀಗ ತೆರೆ ಕಂಡಿದೆ. ಅಶು ಬೆದ್ರ ನಿರ್ಮಾಣ ಮಾಡಿ ನಾಯಕನಾಗಿಯೂ ನಟಿಸಿರುವ ಈ ಚಿತ್ರ ಕನ್ನಡದ ಮಟ್ಟಿಗೆ ಅಪರೂಪದ ಕಥೆಯೊಂದಿಗೆ, ಅಚ್ಚುಕಟ್ಟಾದ ನಿರೂಪಣೆಯೊಂದಿಗೆ ಪ್ರೇಕ್ಷಕರನ್ನೆಲ್ಲ ಖುಷಿಗೊಳಿಸಿದೆ. ಮೊದಲ ದಿನವೇ ಅಳಿದು ಉಳಿದವರಿಗೆ ಸಿಕ್ಕಿರೋ ಪ್ರತಿಕ್ರಿಯೆಗಳೇ ದೊಡ್ಡ ಗೆಲುವಿನ ಮುನ್ಸೂಚನೆಯಾಗಿಯೂ ಕಾಣಿಸುತ್ತಿದೆ.

ಇಲ್ಲಿ ಮೂಢ ನಂಬಿಕೆ ಮತ್ತು ನಂಬಿಕೆಗಳನ್ನು ಮುಖಾಮುಖಿಯಾಗಿಸಿ ವಾಸ್ತವವನ್ನು ಶೋಧಿಸುವಂಥಾ ಪ್ರಯತ್ನ ಮಾಡಲಾಗಿದೆ. ಈ ಚಿತ್ರದಲ್ಲಿ ಅಶು ಬೆದ್ದ ಟಿವಿ ವಾಹಿನಿಯ ಪ್ರಖ್ಯಾತ ಶೋ ಒಂದರ ನಿರೂಪಕನಾಗಿ ಕಾರ್ಯ ನಿರ್ವಹಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಮೂಢ ನಂಬಿಕೆಯನ್ನು ಉತ್ತೇಜಿಸದೆ ಅಸಲೀ ಸತ್ಯವನ್ನು ತೆರೆದಿಡುವಂಥಾ ಕಾರ್ಯಕ್ರಮ. ಹೀಗೆ ಕಾರಣ ಎಂಬ ಈ ಶೋನ ತೊಂಬತ್ತೊಂಬತ್ತು ಕಂತುಗಳನ್ನು ಯಶಸ್ವಿಯಾಗಿ ಪೂರೈಸಿಕೊಳ್ಳುವ ಆ ನಿರೂಪಕನ ಮುಂದೆ ನೂರನೇ ಶೋಗಾಗಿ ಸಜ್ಜಾಗುವಾಗ ಸವಾಲೊಂದು ಎದುರಾಗುತ್ತದೆ. ಭೂತವಿದೆ ಎಂಬ ಕಾರಣದಿಂದ ಸೇಲಾಗದೆ ಪಾಳು ಬಿದ್ದಿರೋ ಮನೆ ಮಾಲೀಕನೊಬ್ಬ ಆ ಮನೆಯಲ್ಲಿ ದೆವ್ವವಿಲ್ಲ ಅಂತ ಸಾಬೀತುಗೊಳಿಸುವಂತೆ ಸವಾಲು ಹಾಕುತ್ತಾನೆ.

ಮಾಮೂಲಿ ಜಾಡಿನ ಸಿನಿಮಾಗಳಾದರೆ ಆ ಮನೆಯ ತುಂಬಾ ಚಿತ್ರವಿಚಿತ್ರ ಭೂತಗಳನ್ನು ತುಂಬಿಕೊಂಡು ಭಯ ಬೀಳಿಸೋದೆ ಮುಖ್ಯವೆಂದು ಪರಿಗಣಿಸುತ್ತಿದ್ದವು. ಇಲ್ಲ ಅಂಥಾ ದೆವ್ವದ ಭಯವನ್ನು, ಮನುಷ್ಯನೊಳಗಿನ ಭ್ರಮೆಯನ್ನು ಮುಖಾಮುಖಿಯಾಗಿಸಲಾಗಿದೆ. ಆ ನಂತರದಲ್ಲಿ ಚಿತ್ರ ವಿಚಿತ್ರವಾದ ವಿದ್ಯಮಾನಗಳೇ ಘಟಿಸುತ್ತವೆ. ಅದೆಲ್ಲವೂ ರೋಚಕವಾಗಿಯೇ ಮೂಡಿ ಬಂದಿದೆ. ಇಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು ಅಶು ಬೆದ್ದರ ಅವರು ನಟಿಸಿರುವ ರೀತಿ. ಇದುವರೆಗೂ ನಿರ್ಮಾಪಕರಾಗಿದ್ದ ಅವರು ನಾಯಕನಾಗಿಯೂ ನೆಲೆ ಕಂಡುಕೊಳ್ಳುವ ಸ್ಪಷ್ಟ ಸೂಚನೆಗಳೇ ಅವರ ನಟನೆಯಲ್ಲಿ ಸಿಕ್ಕಿವೆ. ಸಂಗೀತಾ ಭಟ್, ಅತುಲ್ ಕುಲಕರ್ಣಿ, ಬಿ ಸುರೇಶ, ಪವನ್ ಕುಮಾರ್ ಸೇರಿಒದಂತೆ ಎಲ್ಲ ಕಲಾವಿದರೂ ಚೆಂದಗೆ ನಟಿಸಿದ್ದಾರೆ. ಈ ಎಲ್ಲದರೊಂದಿಗೆ ಸದರಿ ಚಿತ್ರ ಹೊಸಾ ಅನುಭೂತಿ ನೀಡುವಂತೆ ಮೂಡಿ ಬಂದಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions