ಹಿಮಾಚಲ ಪ್ರದೇಶ ಸರ್ಕಾರದಿಂದ ಕಂಗನಾ ರಣಾವತ್ ಗೆ ಸಂಪೂರ್ಣ ಭದ್ರತೆ : ಸಿಎಂ ಜೈರಾಮ್ ಠಾಕೂರ್ – Kannada News Now


India

ಹಿಮಾಚಲ ಪ್ರದೇಶ ಸರ್ಕಾರದಿಂದ ಕಂಗನಾ ರಣಾವತ್ ಗೆ ಸಂಪೂರ್ಣ ಭದ್ರತೆ : ಸಿಎಂ ಜೈರಾಮ್ ಠಾಕೂರ್

ಹಿಮಾಚಲ ಪ್ರದೇಶ: ಬಾಲಿವುಡ್ ನಟಿ ಕಂಗನಾ ರಾಣಾವತ್​​ಗೆ ಹಿಮಾಚಲ ಪ್ರದೇಶ ಸರ್ಕಾರ ಸಂಪೂರ್ಣ ಭದ್ರತೆ ನೀಡಲಿದೆ ಎಂದು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಹೇಳಿದ್ದಾರೆ.

ನಟಿ ಕಂಗನಾ ಅವರ ಸಹೋದರಿ ಕರೆ ಮಾಡಿ ಸಹೋದರಿ ಕಂಗನಾ ಜೀವ ಬೆದರಿಕೆ ಎದುರಿಸುತ್ತಿರುವುದರಿಂದ ಸೂಕ್ತ ರಕ್ಷಣೆ ಒದಗಿಸುವಂತೆ ಮನವಿ ಮಾಡಿಕೊಂಡರು. ಜೊತೆಗೆ ಅವರ ತಂದೆ ಕೂಡ ಭದ್ರತೆ ಕೋರಿ ಪೊಲೀಸ್​ ಇಲಾಖೆಗೆ ಪತ್ರ ಬರೆದಿದ್ದಾರೆ ಎಂದು ಸಿಎಂ ಜೈರಾಮ್ ಠಾಕೂರ್ ತಿಳಿಸಿದ್ದಾರೆ.

ಕಂಗನಾ ಹಿಮಾಚಲ ಪ್ರದೇಶದ ಮಗಳು ಹಾಗೂ ಖ್ಯಾತ ನಟಿ ಕೂಡ ಹೌದು. ಹೀಗಾಗಿ ಅವರಿಗೆ ಸೂಕ್ತ ಭದ್ರತೆ ಒದಗಿಸುವುದು ನಮ್ಮ ಕರ್ತವ್ಯ. ಈ ಹಿನ್ನೆಲೆ ನಾನು ಡಿಜಿಪಿ ಸಂಜಯ್​ ಕುಂಡು ಅವರಿಗೆ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿರುವುದಾಗಿ ತಿಳಿಸಿದ್ದಾರೆ.