ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಹಲ್ಲು ನೋವಿಗೆ ಚಿಕಿತ್ಸೆ ಪಡೆದ ಯುವತಿಯ ಸ್ಥಿತಿ ಘನಘೋರವಾಗಿದೆ. ಕಳೆದ 20 ದಿನಗಳಿಂದ ಮನೆಯಿಂದ ಯವತಿ ಆಚೆ ಬಾರದೆ ಕಣ್ಣಿರು ಹಾಕುತ್ತಿದ್ದು, ಸುಂದರವಾದ ಯುವತಿ ಮುಖವೇ ವಿಕಾರಗೊಳಿಸಿದ ಮಾಹಿತಿ ಬಹಿರಂಗವಾಗಿದೆ.
ಕಳೆದ ತಿಂಗಳು 25ನೇ ತಾರೀನಂದು ಜೆ.ಪಿ ನಗರದ ಡೆಂಟಲ್ ಆಸ್ಪತ್ತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಯುವತಿ ಮುಖವೇ ರಾತ್ರಿಯಿಂದ ಬೆಳಗಾವಷ್ಟರಲ್ಲಿ ವಿಚಿತ್ರವಾಗಿ ಮುಖದಲ್ಲಿ ಊತ ಕಾಣಿಸಿಕೊಂಡಿದೆ. ಬಳಿಕ ಆಸ್ಪತ್ರೆ ತೆರಳಿ ಮಾಹಿತಿ ನೀಡಿದ್ರೂ ಆಸ್ಪತ್ರೆಯಲ್ಲಿ ನಿಮಗೆ ಬೇರೆ ಕಡೆ ಚಿಕಿತ್ಸೆ ಕೊಡಿಸುತ್ತೇವೆ ಎಂದಿದ್ದರು ಬಳಿಕ ಇದೀಗ ಯಾವುದೇ ಸ್ಪಂದನೆ ನೀಡದ ಹಿನ್ನೆಲೆ ಇದೀಗ ಯುವತಿ ಜೆಪಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.