ಕನಕಪುರ, ರಾಮನಗರ ಬೆಂಗಳೂರು ಸೇರಿಸುವ ವಿಚಾರ : ಯಾರೂ ಯಾವುದನ್ನೂ ಎಲ್ಲೂ ಸೇರಿಸಲ್ಲ : ಡಿಕೆ ಶಿವಕುಮಾರ್

ಬೆಂಗಳೂರು : ಕನಕಪುರ ರಾಮನಗರ ಹಾಗೂ ಚನ್ನಪಟ್ಟಣವನ್ನು ಬೆಂಗಳೂರು ನಗರಕ್ಕೆ ಸೇರಿಸುವ ವಿಚಾರವಾಗಿ ಇಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿ ಯಾರು ಯಾವುದನ್ನು ಎಲ್ಲೂ ಸೇರಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದನ್ನು ಎಲ್ಲಿಗೂ ಸೇರಿಸುವುದಿಲ್ಲ. ಕನಕಪುರ ಕನಕಪುರದಲ್ಲೇ ಇರುತ್ತೆ. ರಾಮನಗರ ರಾಮನಗರದಲ್ಲಿ ಇರುತ್ತದೆ. ಮಾಗಡಿ ಮಾಗಡಿಯಲ್ಲೇ ಇರುತ್ತದೆ. ಚನ್ನಪಟ್ಟಣ ಚನ್ನಪಟ್ಟಣದಲ್ಲಿ ಇರುತ್ತದೆ.ಯಾರು ಯಾವುದನ್ನು ಎಲ್ಲಿಗೂ ಸೇರಿಸುವುದಿಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.