ಭೀಮೆ ಅಬ್ಬರಕ್ಕೆ ನಲುಗಿದ ‘ಕಲಬುರ್ಗಿ ಜನರು’ : ‘ಪರಿಹಾರ ಕೇಂದ್ರವೇ ನೆರೆಯಿಂದ ಮುಳುಗಡೆ – Kannada News Now


State

ಭೀಮೆ ಅಬ್ಬರಕ್ಕೆ ನಲುಗಿದ ‘ಕಲಬುರ್ಗಿ ಜನರು’ : ‘ಪರಿಹಾರ ಕೇಂದ್ರವೇ ನೆರೆಯಿಂದ ಮುಳುಗಡೆ

ಕಲಬುರ್ಗಿ : ಜಿಲ್ಲೆ ಅಕ್ಷರಶಹ ನೆರೆ, ಪ್ರವಾಹದಿಂದ ನಲುಗಿ ಹೋಗಿದೆ. ಭಾರೀ ಮಳೆಯ ನಡುವೆ ಡ್ಯಾಂಗಳಿಂದ ಹೊರ ಬಂದ ಹೆಚ್ಚುವರಿ ನೀರಿನಿಂದಾಗಿ, ಅನೇಕ ಗ್ರಾಮಗಳೇ ದ್ವೀಪಗಳಾಗಿ ಮಾರ್ಪಟ್ಟಿವೆ. ಅದರಲ್ಲೂ ಭೀಮೆ ಅಬ್ಬರಕ್ಕೆ ಕಲಬುರ್ಗಿ ಜನರು ನಲುಗಿ ಹೋಗುವಂತಾಗಿದೆ.

ಕಲಬುರ್ಗಿ ಜಿಲ್ಲೆಯ ಜನರು ಭೀಮಾನದಿ ನೀರಿನಿಂದ ಉಂಟಾದಂತ ನೆರೆಯಿಂದಾಗಿ, ತತ್ತರಿಸಿ ಹೋಗಿದ್ದಾರೆ. ಜೇವರ್ಗಿ ತಾಲೂಕಿನ ಸರಡಗಿ ಗ್ರಾಮ, ನರೆಯಿಂದಾಗಿ ನಡುಗಡ್ಡೆಯಂತಾಗಿ ಮಾರ್ಪಟ್ಟಿದೆ.

ಇನ್ನೂ ಮಂದರವಾಡ, ಕುಡಿ, ಕೋಬಾಳ ಗ್ರಾಮಗಳು ಕೂಡ ಜಲಾವೃತಗೊಂಡಿವೆ. ನೆರೆ, ಪ್ರವಾಹ ಸಂತ್ರಸ್ತರಿಗಾಗಿ ಕೋಬಾಳ ಗ್ರಾಮದಲ್ಲಿ ನಿರ್ಮಿಸಲಾಗಿದ್ದಂತ ಪರಿಹಾರ ಕೇಂದ್ರ, ನೆರೆಯಲ್ಲಿ ಮುಳುಗಡೆ ಹೊಂದಿದೆ. ಹೀಗಾಗಿ ಪರಿಹಾರ ಕೇಂದ್ರವನ್ನು, ಅಲ್ಲಿದ್ದಂತ ಸಂತ್ರಸ್ತರನ್ನು ಬೇರೆಡೆಗೆ ಸ್ಥಳಾಂತರಿಸುವ ಕಾರ್ಯವನ್ನು ಜಿಲ್ಲಾಡಳಿತ ನಡೆಸುತ್ತಿದೆ.
error: Content is protected !!