ಕೆಂಡದಂತಾದ ಕಲಬರುಗಿ : ದಾಖಲೆಯ 44.4 ಡಿಗ್ರಿ ಉಷ್ಣಾಂಶ ದಾಖಲು !

ಕಲಬುರಗಿ : ಕಲಬುರಗಿ ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಬುಧವಾರ ಗರಿಷ್ಠ ತಾಪಮಾನ 44.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಕಲಬುರಗಿ ಜಿಲ್ಲೆಯ ಕಾಳಗಿಯಲ್ಲಿ 44.4 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಕಲಬುರಗಿಯಲ್‌ಇ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ದಾಖಲಾದ ಸಾರ್ವಕಾಲಿಕ ಗರಿಷ್ಠ ತಾಪಮಾನವಾಗಿದೆ. ಕಲಬುರಗಿಯ ಜಿಲ್ಲೆಯ ನೆಲೋಗಿಯಲ್ಲಿ 42.2, ಸೇಡಂನ ಅಡಕಿಯಲ್ಲಿ 43.5 ಕಲಬುರಗಿ ಪಟ್ಟಣದಲ್ಲಿ 43.5 ಸೇರಿದಂತೆ ಜಿಲ್ಲೆಯ ಬಹುತೇಕ ಹೋಬಳಿಗಳಲ್ಲಿ ಬುಧವಾರ 42 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.