ಬೆಳಗಾವಿ: ನನಗೆ ಮಹಿಳೆಯರ ಬಗ್ಗೆ ಗೌರವವಿದೆ. ಯಾವುದೇ ದುರುದ್ಧೇಶ, ಉದ್ದೇಶದಿಂದ ನಿನ್ನೆ ಸದನದಲ್ಲಿ ಅತ್ಯಾಚಾರದ ಬಗ್ಗೆ ಮಾತನಾಡಿದ ಮಾತು ಅದಾಗಿರಲಿಲ್ಲ. ಸಾಂದರ್ಭಿಕವಾಗಿ ಹೇಳಿದ ಮಾತಾಗಿತ್ತು ಅಷ್ಟೇ. ನನಗೆ ಕ್ಷಮೆ ಕೋರೋದಕ್ಕೆ ಯಾವುದೇ ಪ್ರತಿಷ್ಠೆ, ಗೌರವ ಅಡ್ಡ ಬರೋದಿಲ್ಲ. ಯಾರಿಗೇ ನನ್ನ ಮಾತನಿಂದ ನೋವಾಗಿದ್ದರೇ ಕ್ಷಮೆ ಕೋರುತ್ತೇನೆ. ವಿಷಾಧ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್, ಸದನದಲ್ಲೇ ಕ್ಷಮೆ ಕೋರಿದರು.
ಈ ಬಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಸದನ ಉದ್ದೇಶಿಸಿ ಮಾತನಾಡಿದಂತ ಅವರು, ನಾನು ಹೆಣ್ಣಿಗೆ ಅವಮಾನ ಮಾಡೋದಾಗಲೀ, ಅವರ ವಿರುದ್ಧ ಮಾತನಾಡೋದಾಗಲೀ ಮಾತನಾಡಿದ್ದಲ್ಲ. ನಾನು ಇಲ್ಲಿ ಉಲ್ಲೇಖಿಸಿದಂತ ಮಾತುಗಳು, ಯಾರಿಗೇ ನೋವಾಗಿದ್ದರೂ, ನನಗೆ ಯಾವುದೇ ಪ್ರತಿಷ್ಠೆಯಿಲ್ಲ. ಸದಾ ಕಾಲ ಗೌರವದಿಂದ ನಡೆದುಕೊಳ್ಳಬೇಕೆಂದುಕೊಂಡಿರುವನು. ಸದನದ ಗೌರವ ಕಾಪಾಡಲು ಬದ್ಧರಿದ್ದೇವೆ. ಒಂದು ವೇಳೆ ನನ್ನ ಮಾತಿನಿಂದ ನೋವಾಗಿದ್ದರೇ, ಮುಜುಗರ ವ್ಯಕ್ತ ಪಡಿಸುತ್ತೇನೆ. ನನ್ನಿಂದ ಅಪರಾಧ ಆಗಿದೆ ಎನ್ನುವಂತ ತೀರ್ಪು ಕೊಟ್ಟಿರೋ ಕಾರಣ, ನಾನು ಕ್ಷಮೆ ಕೇಳುತ್ತೇನೆ ಎಂದರು.
ಸ್ಪೀಕರ್ ಆದ ನಿಮ್ಮನ್ನು ಅಪರಾಧಿ ಮಾಡಿದ್ದೇನೆ. ತಾವು ಕ್ಷಮೆ ಕೇಳುವುದಾದರೇ ಕೇಳಿ. ಸದನದ ಸಮಯ ಇದೇ ವಿಚಾರವಾಗಿ ಹಾಳು ಮಾಡೋದು ಬೇಡ. ನೆರೆ, ರಾಜ್ಯದ ಜ್ವಲ್ಪಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸದನದಲ್ಲಿ ಕಾಲಾವಕಾಶ ಸಿಗಲಿ. ನಾನು ಮಾತನಾಡಿದಂತ ವಿಚಾರದ ಬಗ್ಗೆ ಕ್ಷಮೆ ಕೇಳೋದಕ್ಕೆ ನನಗೆ ಯಾವುದೇ ಪ್ರತಿಷ್ಠೆಯಿಲ್ಲ. ನನ್ನ ಮಾತಿನಿಂದ ಯಾರಿಗೇ ನೋವಾಗಿದ್ದರೂ ಕ್ಷಮೆ ಕೇಳುತ್ತೇನೆ. ವಿಷಾದ ವ್ಯಕ್ತ ಪಡಿಸುತ್ತೇನೆ ಎಂದು ಹೇಳಿದರು.