ಪ್ರಧಾನಿ ಮೋದಿ ಜನ್ಮ ದಿನ ಹಿನ್ನೆಲೆ : ಸೇವಾ ಸಪ್ತಾಹಕ್ಕೆ ಚಾಲನೆ ನೀಡಿದ ಜೆ. ಪಿ ನಡ್ಡಾ – Kannada News Now


India

ಪ್ರಧಾನಿ ಮೋದಿ ಜನ್ಮ ದಿನ ಹಿನ್ನೆಲೆ : ಸೇವಾ ಸಪ್ತಾಹಕ್ಕೆ ಚಾಲನೆ ನೀಡಿದ ಜೆ. ಪಿ ನಡ್ಡಾ

ನೊಯ್ಡಾ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ 70ನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೋಮವಾರ ’ಸೇವಾ ಸಪ್ತಾಹ‌‌’ ಎಂಬ ಅಭಿಯಾನಕ್ಕೆ ಚಾಲನೆ ನೀಡಿದರು.

ದೆಹಲಿ ಸಮೀಪದ ಗೌತಮ್‌ಬುದ್ಧ ನಗರ ಜಿಲ್ಲೆಯ ಪಶ್ಚಿಮ ಉತ್ತರ ಪ್ರದೇಶಕ್ಕೆ ಸೇರಿದ ಛಾ‍ಪುರಲಿ ಹಳ್ಳಿಯಲ್ಲಿ ಈ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ ಅವರು, ’ಸೆಪ್ಟಂಬರ್ 17ಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ 70 ವರ್ಷಗಳು ತುಂಬುತ್ತವೆ. ಅವರು ತಮ್ಮ ಜೀವನವನ್ನು ದೇಶದ ಜನರ ಸೇವೆಗಾಗಿ ಮೀಸಲಿಟ್ಟಿದ್ದಾರೆ. ಹೀಗಾಗಿ ಬಿಜೆಪಿ, ಸೆಪ್ಟೆಂಬರ್ 14 ರಿಂದ 20ರವರೆಗೆ ’ಸೇವಾ ಸಪ್ತಾಹ‌’ ಅಭಿಯಾನವಾಗಿ ಆಚರಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದ್ದಾರೆ.