ಉಡುಪಿ :ಬ್ರಹ್ಮಾವರ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಹಳ್ಳಿಬೈಲು (ಸಾಮಾನ್ಯ), ಹೊಸಬೆಂಗ್ರೆ (ಸಾಮಾನ್ಯ), ಕೋಟಶಾಲೆ (ಸಾಮಾನ್ಯ), ಬೆರ್ಳ್ಳಪಾಡಿ (ಸಾಮಾನ್ಯ), ಚಿಪ್ಪಿಕಟ್ಟೆ(ಸಾಮಾನ್ಯ), ತೊಟ್ಟಂ (ಸಾಮಾನ್ಯ), ಉಪ್ಪೂರು ಸಾಲ್ಮರ (ಸಾಮಾನ್ಯ), ಹರಾವು (ಸಾಮಾನ್ಯ) ಮತ್ತು ಹೇರಂಜೆ (ಸಾಮಾನ್ಯ) ಅಂಗನವಾಡಿಗಳಲ್ಲಿ ಖಾಲಿ ಇರುವ ಸಹಾಯಕಿಯರ ಹುದ್ದೆಗೆ 18 ರಿಂದ 35 ವರ್ಷದೊಳಗಿನ, ಎಸ್.ಎಸ್.ಎಲ್.ಸಿ ಉತ್ತೀರ್ಣರಾದ ಅರ್ಹ ಸ್ಥಳೀಯ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮಾರ್ಚ್ 29 ಕೊನೆಯ ದಿನವಾಗಿದ್ದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಹಂದಾಡಿ ಗ್ರಾಮ ಪಂಚಾಯತ್ ಹತ್ತಿರ, ಗಾಂಧಿಮೈದಾನ, ಬ್ರಹ್ಮಾವರ ದೂ.ಸಂಖ್ಯೆ: 0820-2562244 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಬ್ರಹ್ಮಾವರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಕುಂದಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಹರ್ಕೂರು ಗ್ರಾಮ (ಸಾಮಾನ್ಯ), ಜಪ್ತಿ ಗ್ರಾಮದ ಕರಿಕಲ್ ಕಟ್ಟೆ (ಸಾಮಾನ್ಯ) ಮತ್ತು ಯಡಮೊಗೆ ಗ್ರಾಮದ ಕೊಳಾಲಿ (ಎಸ್.ಟಿ) ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಕರ್ಕುಂಜೆ ಗ್ರಾಮದ ಹೆರ್ಜಾಡಿ (ಸಾಮಾನ್ಯ), ತೆಕ್ಕಟ್ಟೆ ಗ್ರಾಮ (ಸಾಮಾನ್ಯ), ತೆಕ್ಕಟ್ಟೆ ಗ್ರಾಮದ ಕೊಮೆ (ಸಾಮಾನ್ಯ), ಬೇಳೂರು ಗ್ರಾಮದ ದೇವಸ್ಥಾನಬೆಟ್ಟು (ಸಾಮಾನ್ಯ), ಹೆಸ್ಕತ್ತೂರು ಗ್ರಾಮ (ಸಾಮಾನ್ಯ), ಹರ್ಕೂರು ಗ್ರಾಮ (ಸಾಮಾನ್ಯ), ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಕೊಳನ್ಕಲ್ (ಸಾಮಾನ್ಯ), ವಾರ್ಡ್-3 ರ ಕರ್ನಾಟಕ ಟೈಲ್ಸ್ (ಸಾಮಾನ್ಯ), ಮೊಳಹಳ್ಳಿ ಗ್ರಾಮದ ಮಾಸ್ತಿಕಟ್ಟೆ (ಸಾಮಾನ್ಯ), ಅಮಾಸೆಬೈಲು ಗ್ರಾಮದ ಬಳ್ಮನೆ (ಸಾಮಾನ್ಯ), ಕುಳಂಜೆ ಗ್ರಾಮದ ಭರತ್ಕಲ್ (ಸಾಮಾನ್ಯ), ಯಡ್ತರೆ ಗ್ರಾಮದ ಕೊರಾಡಿ (ಎಸ್.ಟಿ) ಹಾಗೂ ಕೊಡ್ಲಾಡಿ ಗ್ರಾಮದ ಮಾರ್ಡಿ (ಎಸ್.ಟಿ) ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಸಹಾಯಕಿ ಹುದ್ದೆಗಳ ನೇಮಕಾತಿಗೆ ಆಫ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮಾರ್ಚ್ 29 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ತಾಲೂಕು ಪಂಚಾಯತ್ ಹತ್ತಿರ, ಶಾಸ್ತಿçà ಪಾರ್ಕ್, ಕುಂದಾಪುರ ದೂ.ಸಂಖ್ಯೆ: 08254-230807 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
BREAKING NEWS: ರಂಜಾನ್ ಮಾಸದ ಚಂದ್ರದರ್ಶನ ಹಿನ್ನಲೆ: ನಾಳೆಯಿಂದ ಕರಾವಳಿಯಾದ್ಯಂತ ಉಪವಾಸ ವ್ರತ ಆರಂಭ
BREAKING NEWS: ರಂಜಾನ್ ಮಾಸದ ಚಂದ್ರದರ್ಶನ ಹಿನ್ನಲೆ: ನಾಳೆಯಿಂದ ಕರಾವಳಿಯಾದ್ಯಂತ ಉಪವಾಸ ವ್ರತ ಆರಂಭ