JOB ALERT : ರಾಜ್ಯ ಸರ್ಕಾರದಿಂದ `ಕಲ್ಯಾಣ ಕರ್ನಾಟಕದಲ್ಲಿ ಬೃಹತ್ ಉದ್ಯೋಗ ಮೇಳ’ : ಈ ರೀತಿ ನೋಂದಣಿ ಮಾಡಿಕೊಳ್ಳಿ.!

ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದ್ದು, ಕಲ್ಯಾಣ ಕರ್ಣಾಟಕದಲ್ಲಿ ಏಪ್ರಿಲ್ ನಲ್ಲಿ  ಬೃಹತ್ ಉದ್ಯೋಗಮೇಳ” ಆಯೋಜಿಸಲಾಗುವುದು. ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಕಲ್ಯಾಣ ಕರ್ನಾಟಕದಲ್ಲಿ ಏಪ್ರಿಲ್ ನಲ್ಲಿ ಬೃಹತ್ ಉದ್ಯೋಗಮೇಳವನ್ನು ಆಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ 250 ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳಲಿದ್ದು, ಯಾವುದೇ ವಿದ್ಯಾರ್ಹತೆ ಇರುವ ನಿರುದ್ಯೋಗಿಗಳು ಈ ಉದ್ಯೋಗಮೇಳದಲ್ಲಿ ಭಾಗಿಯಾಗಬಹುದು. ಆಸಕ್ತ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳು https://skillconnect.kaushalkar.com ನಲ್ಲಿ ನೋಂದಾಯಿಸಿಕೊಂಡು ಈ ಉದ್ಯೋಗಮೇಳದಲ್ಲಿ ಭಾಗಿಯಾಗಬಹುದು.